ಮಂಗಳವಾರ, ಫೆಬ್ರವರಿ 18, 2020
26 °C

ಆರ್ಥಿಕ ಅಸಮಾನತೆ ಹಿಗ್ಗುತ್ತಿರುವುದು ಸರಿಯಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದ 63 ಆಗರ್ಭ ಸಿರಿವಂತರ ಬಳಿ ಇರುವ ಸಂಪತ್ತು, ಕೇಂದ್ರ ಸರ್ಕಾರದ 2018-19ನೇ ಸಾಲಿನ ಬಜೆಟ್ ಮೊತ್ತಕ್ಕಿಂತ ಹೆಚ್ಚಿನ ಪ್ರಮಾಣದ್ದು ಎಂಬ ಸುದ್ದಿಯನ್ನು ಓದಿ (ಪ್ರ.ವಾ., ಜ. 21) ಆಘಾತವಾಯಿತು. 130 ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆ ಇರುವ ಮತ್ತು ಬಡವರನ್ನೂ ಗಣನೀಯ ಪ್ರಮಾಣದಲ್ಲಿ ಹೊಂದಿರುವ ನಮ್ಮ ದೇಶದಲ್ಲಿನ ಈ ಪರಿ ಆರ್ಥಿಕ ಅಸಮಾನತೆ ವಿಷಾದನೀಯ.

ಈ ಕುಬೇರರ ಮನ ಕರಗಿ, ತಮ್ಮಲ್ಲಿನ ಲಕ್ಷ್ಮಿಯನ್ನು ದೇಶದ ಅಭಿವೃದ್ಧಿಗೆ, ಬಡವರ ಏಳಿಗೆಗೆ ಬಳಸುತ್ತಾರೆ ಎಂದು ಆಶಿಸೋಣವೇ? ಇಲ್ಲವೇ ಪ್ರಧಾನಿಯವರು ಕಟ್ಟುನಿಟ್ಟಿನ ಕ್ರಮಗಳ ಮೂಲಕ, ಈ ಆರ್ಥಿಕ ಅಸಮಾನತೆಯ ಪಿಡುಗನ್ನು ನಿವಾರಿಸುತ್ತಾರೆಂದು ನಿರೀಕ್ಷಿಸಬಹುದೇ?

–ಸಿ.ಪಿ.ಸಿದ್ಧಾಶ್ರಮ, ಮೈಸೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು