ಶನಿವಾರ, ಅಕ್ಟೋಬರ್ 19, 2019
22 °C

ಬದಲಾವಣೆಗೆ ತೆರೆದುಕೊಳ್ಳುವಂತೆ ಮಾಡೋಣ

Published:
Updated:

ಚಿತ್ರದುರ್ಗದ ಸಂಸದ ಎ.ನಾರಾಯಣ ಸ್ವಾಮಿ ಅವರು ಪಾವಗಡ ತಾಲ್ಲೂಕ್ಕಿನ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿ ಪ್ರವೇಶಿಸುವುದನ್ನು ಅಲ್ಲಿನ ಜನ ತಡೆದ ವಿದ್ಯಮಾನವು ಮೌಢ್ಯ ನಮ್ಮ ಸಮಾಜದಲ್ಲಿ ಎಷ್ಟೊಂದು ಆಳವಾಗಿ ಬೇರುಬಿಟ್ಟಿದೆ ಎಂಬುದಕ್ಕೆ ದ್ಯೋತಕ. ದೇವರೆಂದೂ ಪೂಜಿಸುವ ಚಂದ್ರನ ಮೇಲೆ ಕಾಲಿಟ್ಟು ಬಂದರೂ ನಮ್ಮ ದೇಶಕ್ಕೆ ಮೌಢ್ಯಗಳಿಂದ ಬಿಡಿಸಿಕೊಳ್ಳಲು ಆಗಿಲ್ಲ. ಮಹಿಳೆಯರನ್ನು ಮುಟ್ಟು ಮತ್ತು ಹೆರಿಗೆಯ ಸಂದರ್ಭದಲ್ಲಿ ಹಟ್ಟಿಯಿಂದ ಹೊರಗೆ ಇರಿಸುವುದು ಅಮಾನವೀಯ. 

ಆಚರಣೆ, ಸಂಪ್ರದಾಯಗಳ ಹೆಸರಿನಲ್ಲಿ ಅನಿಷ್ಟ ವಿಚಾರಗಳನ್ನು ಅಮಾಯಕ ಜನರ ತಲೆಗೆ ತುಂಬಿ, ಅವರನ್ನು ಮೌಢ್ಯದ ಕೂಪಕ್ಕೆ ತಳ್ಳಲಾಗಿದೆ. ಅವುಗಳ ಹಿಡಿತದಿಂದ ಅವರನ್ನು ಬಿಡಿಸುವುದು ಹೇಗೆ ಎಂಬುದರ ಬಗ್ಗೆ ನಮ್ಮ ಆಡಳಿತ ವ್ಯವಸ್ಥೆ ಯೋಚಿಸಬೇಕು. ಅದಕ್ಕೆ  ಶಿಕ್ಷಣ ಒಂದು ಸಾಧನ. ಅದರ ಮೂಲಕ ಬದಲಾವಣೆಗೆ ಅವರು ತೆರೆದುಕೊಳ್ಳುವಂತೆ ಮಾಡಬೇಕು.

-ನಾಗರಾಜ್ ಗರಗ್, ಹೊಸದುರ್ಗ

Post Comments (+)