ಸೋಮವಾರ, ಜನವರಿ 24, 2022
29 °C

ಮೊಟ್ಟೆ ನೀಡಿಕೆಗೆ ವಿರೋಧ ಸಲ್ಲ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವುದನ್ನು ಆಕ್ಷೇಪಿಸಿರುವ ಶಾಂತಿನಾಥ ಕೆ. ಅವರ ವಾದವನ್ನು (ವಾ.ವಾ., ಜ. 7) ಒಪ್ಪಲಾಗದು. ಸಾಮಾನ್ಯವಾಗಿ ಆಹಾರ ಪದ್ಧತಿಯು ಅವರವರ ಮನೆಯ ಆಚಾರ ವಿಚಾರ, ಧಾರ್ಮಿಕ, ವೈಚಾರಿಕ ಸಂಸ್ಕೃತಿಗಳಿಗೆ ತಕ್ಕಂತೆ ಮಕ್ಕಳ ಮನಸ್ಸಿನಲ್ಲಿ ಮೈಗೂಡಿರುತ್ತದೆ. ಇದಕ್ಕೆ ಒಂದು ನಿದರ್ಶನವೆಂದರೆ, ನಾನು ಆರರಿಂದ ಹತ್ತನೆಯ ತರಗತಿಯವರೆಗೂ ಜವಾಹರ್ ನವೋದಯ ವಿದ್ಯಾಲಯದಲ್ಲಿ ಅಭ್ಯಸಿಸಿದ್ದು. ಅಲ್ಲಿ ಊಟದ ಸಮಯದಲ್ಲಿ ವಾರಕ್ಕೆ ಎರಡು ಬಾರಿ ಮೊಟ್ಟೆ ನೀಡುತ್ತಿದ್ದರು. ಆದರೆ ನನ್ನ ಕೆಲವು ಸಸ್ಯಾಹಾರಿ ಸ್ನೇಹಿತರು, ಸಹಪಾಠಿಗಳು ಮಾತ್ರ ಶಿಕ್ಷಕರು, ಸ್ನೇಹಿತರು ಹೇಳಿದರೆಂದು ಅಥವಾ ನಾವು ಮೊಟ್ಟೆ ತಿನ್ನುವುದನ್ನು ನೋಡಿ ಪ್ರಚೋದನೆಗೊಂಡು ತಿನ್ನುವ ನಿರ್ಧಾರ ಮಾಡಲಿಲ್ಲ. ಅ ಒಡನಾಡಿಗಳು ಇಂದಿಗೂ ಸಸ್ಯಾಹಾರಿಗಳಾಗಿಯೇ ಉಳಿದಿದ್ದಾರೆ.

ಸರ್ವಸಮ್ಮತ ಆಹಾರಕ್ಕೆ ನಮ್ಮ ಒಪ್ಪಿಗೆ ಇದೆ. ಅದರೆ ಮೊಟ್ಟೆ ನೀಡುವುದನ್ನು ನಿಲ್ಲಿಸಬೇಕು ಎಂಬ ತರ್ಕವಿಲ್ಲದ ವಾದಕ್ಕೆ ನಮ್ಮ ಆಕ್ಷೇಪವಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ, ದೇಶದ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮೊಟ್ಟೆ ನೀಡುವುದು ಸಹಕಾರಿಯಾಗಲಿದೆ.

– ಪ್ರದೀಪ್ ಕುಮಾರ್ ಡಿ., ಹಿರಿಯೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.