ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಸಮ್ಮತ ಆಹಾರ ನೀಡಲಿ

ಅಕ್ಷರ ಗಾತ್ರ

ಮೊಟ್ಟೆಗೆ ಸಂಬಂಧಿಸಿದಂತೆ ಸಿ.ಮುತ್ತುರಾಯಪ್ಪ ಅವರ ವಾದವನ್ನು (ವಾ.ವಾ., ಜ. 6) ಒಪ್ಪಲಾಗದು. ನೀವು ಮೊಟ್ಟೆ ಸೇವಿಸುವುದು ನಿಮ್ಮ ಆಹಾರದ ಹಕ್ಕು ಎಂದು ಹೇಗೆ ಪ್ರತಿಪಾದಿಸುತ್ತೀರೋ ಹಾಗೇ ಮೊಟ್ಟೆ ತಿನ್ನದೇ ಇರುವುದು ನಮ್ಮ ಆಹಾರದ ಹಕ್ಕು. ತಿನ್ನಲು ಒಲ್ಲದ ಕುಟುಂಬಗಳ ಮಕ್ಕಳಿಗೆ ಅರಿವಿನ ಕೊರತೆ ಇರುವಾಗ, ಶಾಲೆಗಳಲ್ಲಿ ಮೊಟ್ಟೆ ನೀಡಿ ಅವರಿಗೆ ತಿನ್ನಲು ಪ್ರಚೋದನೆ ನೀಡುವುದು ಎಷ್ಟು ಸರಿ? ಅಲ್ಲದೆ ಶಿಕ್ಷಕರು ಕೊಟ್ಟರು ಅಥವಾ ಹೇಳಿದರು, ಸ್ನೇಹಿತರು ಹೇಳುತ್ತಾರೆ, ತಿನ್ನುತ್ತಾರೆ ಎಂದು ಗೊತ್ತಿಲ್ಲದೇ ಮಕ್ಕಳು ತಿನ್ನುವುದು ಆ ಮಕ್ಕಳ ಕುಟುಂಬಗಳಿಗೆ ಮಾಡುವ ಮೋಸವಾಗಿದೆ. ಸಾಮೂಹಿಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳಿಗೆ ಸರ್ವಸಮ್ಮತ ಆಹಾರವನ್ನು ನೀಡಲಿ.

- ಶಾಂತಿನಾಥ ಕೆ. ಹೋತಪೇಟಿ,ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT