ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಪ ಫಲಿಸಲು ತ್ರೇತಾಯುಗವೇ?

Last Updated 21 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತಪಡಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಸ್ವಾಮೀಜಿಗಳಿಗೆ ಸರ್ಕಾರವು ಪೊಲೀಸರನ್ನು ಛೂ ಬಿಟ್ಟು ಅವಮಾನ ಮಾಡಿರುವುದರಿಂದ, ಬಸವರಾಜ ಬೊಮ್ಮಾಯಿ ತಿಂಗಳಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಬಸವಪ್ರಕಾಶ ಸ್ವಾಮೀಜಿ ಹಳಿದಿರುವುದು ಶುದ್ಧ ಅಸಂಬದ್ಧ. ಇದೇನು ತ್ರೇತಾಯುಗ ವಾಯಿತೇ ಶಾಪ ಕೊಟ್ಟ ಕೂಡಲೇ ಫಲಿಸಲು. ಸ್ವಾಮಿಗಳು ಜನರ ಒಳಿತಿಗಾಗಿ ಶ್ರಮಪಡಬೇಕೇ ವಿನಾ ಶಾಪ ಕೊಡುವುದಲ್ಲ. ಒಬ್ಬೊಬ್ಬ ಮಠಾಧೀಶರೂ ಒಂದೊಂದು ಆಶ್ವಾಸನೆ ಕೊಡುತ್ತಾ ಹೋದರೆ ಜನರು ಯಾವ ರೀತಿಯಲ್ಲಿ ಅವರನ್ನು ಹಿಂಬಾಲಿಸುತ್ತಾರೆ ಎಂಬ ಅರಿವಾದರೂ ಬೇಡವೇ ಜ್ಞಾತಿಗಳಿಗೆ? ಇನ್ನು ಮುಂದಾದರೂ ಅವರು ಇಂತಹ ಗೊಡ್ಡು ಬೆದರಿಕೆಗಳನ್ನು ಹಾಕದೆ ಸಮಾಜದ ಒಳಿತಿಗಾಗಿ ಶ್ರಮಿಸಲಿ.

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT