ಹೂವಿನ ಸುರಿಮಳೆ ಏಕೆ?

ಸೋಮವಾರ, ಏಪ್ರಿಲ್ 22, 2019
32 °C

ಹೂವಿನ ಸುರಿಮಳೆ ಏಕೆ?

Published:
Updated:

ಚುನಾವಣಾ ಪ್ರಚಾರದ ವೇಳೆಯಲ್ಲಿ, ಅದರಲ್ಲೂ ವಿಶೇಷವಾಗಿ ಮಂಡ್ಯ ಜಿಲ್ಲೆಯಲ್ಲಿ ಜನನಾಯಕರು ಹಾಗೂ ಸಿನಿಮಾ ನಟರ ಮೇಲೆ ಅವರವರ ಬೆಂಬಲಿಗರು ದೊಡ್ಡ ವಾಹನದ ಮೇಲೆ ನಿಂತು ಹೂವಿನ ಮಳೆಗರೆಯುತ್ತಿದ್ದಾರೆ, ಬೃಹತ್‌ ಹೂವಿನ ಹಾರಗಳನ್ನು ಹಾಕಿ ಸಂಭ್ರಮಿಸುತ್ತಿದ್ದಾರೆ.

ಈ ನೋಟ ದಿನನಿತ್ಯ ಟಿ.ವಿ. ವಾಹಿನಿಗಳಲ್ಲಿ ಕಂಡು ಬರುತ್ತಿದೆ. ಹೀಗೆ ಹೂವಿಗೆ ಇಷ್ಟೊಂದು ದುಡ್ಡು ಸುರಿಯುವುದರಿಂದ ಏನು ಪ್ರಯೋಜನ?

ಅಭ್ಯರ್ಥಿಗಳ ಬೆಂಬಲಿಗರು ಅದಕ್ಕೆ ಬಳಸುವ ಹಣವನ್ನು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ, ದನಕರುಗಳ ಮೇವು ಸಂಗ್ರಹಣೆಯಂತಹ ಕಾರ್ಯಗಳಿಗೆ ಬಳಸಬಹುದು. ಇಲ್ಲವೇ ಯಾವುದಾದರೂ ಅನಾಥಾಶ್ರಮಕ್ಕೆ ನೀಡಬಹುದು. ಇಪ್ಪತ್ತು ಗಿಡಗಳನ್ನಾದರೂ ನೆಡಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !