ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲ ನಿವಾರಿಸಿ

Last Updated 12 ಮೇ 2021, 19:31 IST
ಅಕ್ಷರ ಗಾತ್ರ

ಕೋವಿಡ್‌ ಲಸಿಕೆ ಬಗ್ಗೆ ಸರ್ಕಾರದ ಹೇಳಿಕೆಗಳು, ವೆಬ್‌ಸೈಟ್‌ನಲ್ಲಿನ ಮಾಹಿತಿಗಳು ಗೊಂದಲಮಯವಾಗಿವೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಲಸಿಕೆ ಲಭ್ಯ ಎಂದು ಒಬ್ಬ ಸಚಿವರು ಅಭಿಯಾನ ಶುರು ಮಾಡಿದರು. ನಂತರ, ಲಾಕ್‌ಡೌನ್ ಕಾರಣದಿಂದಾಗಿ ಇದನ್ನು ಮುಂದೂಡಲಾಗಿದೆ ಎಂದು ಮತ್ತೊಬ್ಬ ಸಚಿವರು ಹೇಳಿದರು. Co.win ವೆಬ್‌ಸೈಟ್‌ನಲ್ಲೂ ಶೆಡ್ಯೂಲ್‌ಗೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಅವಕಾಶವಿದೆ. ಆದರೆ ಸರ್ಕಾರಿ ಆಸ್ಪತ್ರೆ, ಇನ್ನಿತರ ಲಸಿಕೆ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ. ಅವರೆಲ್ಲರೂ Co.win ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡವರೇ ಅಥವಾ ಬರುವವರಿಗೆಲ್ಲಾ ಲಸಿಕೆ ನೀಡಲಾಗುತ್ತಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಇನ್ನು 60 ವರ್ಷ ಮೇಲ್ಪಟ್ಟವರಿಗೆ ಎರಡನೇ ಡೋಸ್ ಲಸಿಕೆಯನ್ನು ನಿಗದಿತ ದಿನಾಂಕದಲ್ಲಿ ಕೊಡಲಿಲ್ಲ. ಲಸಿಕೆ ಬಗ್ಗೆ ಅವರಿಗೆ ಮಾಹಿತಿಯನ್ನೂ ಕೊಟ್ಟಿಲ್ಲ. ಈಗ ಲಸಿಕೆ ಬಗ್ಗೆ ಅವರಿವರ ಬಳಿ ವಿಚಾರಿಸುವುದೇ ಅವರೆಲ್ಲರ ದಿನಚರಿಯಾಗಿದೆ. ಸಚಿವರುಗಳ ಹೇಳಿಕೆಗಳು, ಲಸಿಕೆ ಕೇಂದ್ರಗಳ ಕಾರ್ಯಸೂಚಿ, ವೆಬ್‌ಸೈಟ್‌ನ ಮಾಹಿತಿ ಎಲ್ಲದರಲ್ಲೂ ಸಾಮ್ಯತೆ ಇರುವಂತೆ ನೋಡಿಕೊಳ್ಳಿ.

–ಮಂಜುನಾಥ್ ಜಿ., ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT