ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಆವರಿಸಿದೆ ಹೊಗಳುಭಟರ ಭದ್ರಕೋಟೆ

Last Updated 29 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ತುರ್ತುಪರಿಸ್ಥಿತಿಯ ಕಾರಣ ಚುನಾವಣೆಯಲ್ಲಿ ಸೋತಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಜೊತೆ ಇದ್ದವರು ಪುತ್ರ ಸಂಜಯ್ ಗಾಂಧಿ, ಪಕ್ಷದ ಅಧ್ಯಕ್ಷ ಡಿ.ಕೆ.ಬರುವಾ ಅವರಂಥ ಕೆಲವರು ಮಾತ್ರ. ಆಗ ಇಂದಿರಾ ಗಾಂಧಿಯವರಿಗೆ ಧೈರ್ಯ ತುಂಬಿದವರು ಸಂಜಯ್ ಗಾಂಧಿ. ಸಂಜಯ್‌ ಹಾಗೂ ಇನ್ನೂ ಕೆಲವರ ಆತ್ಮವಿಶ್ವಾಸದಿಂದ, ಛಲದಿಂದ, ಜನತಾ ಸರ್ಕಾರವನ್ನು ಚುನಾವಣೆಯಲ್ಲಿ ಸೋಲಿಸಿ ಮತ್ತೆ ಅಧಿಕಾರ ಪಡೆದರು. ಆದರೆ ಈಗ?

ಕಾಂಗ್ರೆಸ್ ನಾಯಕತ್ವ ಸೋನಿಯಾ ಗಾಂಧಿಯವರದಾದರೂ ಪಕ್ಷವನ್ನು ಮುಷ್ಟಿಯಲ್ಲಿ ಹಿಡಿದಿರುವುದು ಪುತ್ರ ರಾಹುಲ್ ಗಾಂಧಿ. ಅವರ ಅನುಭವದ ಕೊರತೆಯಿಂದ, ಹೊಗಳುಭಟರ ಕೋಟೆಯಲ್ಲಿ ಸಿಲುಕಿರುವುದರಿಂದ ಪಕ್ಷ ಅನಾಥವಾಗುತ್ತಿದೆ. ಆಗಿನ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಅವರಿಗೂ ಇಂದಿನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೂ ಅಜಗಜಾಂತರವಿದೆ. ಪಕ್ಷದಲ್ಲಿ ಬಲಿಷ್ಠ ನಾಯಕರಿದ್ದರೂ ಹೊಗಳುಭಟರ ಭದ್ರಕೋಟೆಯಿಂದ ನಾಯಕತ್ವ ಹೊರಬರುವುದು ಅಸಾಧ್ಯವಾಗಿದೆ. ಇದನ್ನು ಹೇಳುವವರಿಗೂ ಕೇಳುವವರಿಗೂ ಆತ್ಮವಿಶ್ವಾಸ, ಛಲ ಇಲ್ಲದಿದ್ದರೆ, ಕೋಟೆ ಛಿದ್ರವಾಗುವುದನ್ನು ತಡೆಯಲು ಸಾಧ್ಯವೇ?

-ಪಿ.ಸಿ.ಕೇಶವ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT