ಶನಿವಾರ, ಆಗಸ್ಟ್ 13, 2022
27 °C

ವಾಚಕರ ವಾಣಿ: ಪ್ರಾಣ ರಕ್ಷಣೆಗೆ ಒತ್ತು ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ ನಗರದ ಹೊರವಲಯದಲ್ಲಿರುವ ಅರಕೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಕಳ್ಳತನ ಮಾಡಲು ಕಳ್ಳರು ದೇವಸ್ಥಾನದ ಪುರೋಹಿತರೂ ಜೊತೆಗೆ  ಕಾವಲೂ ಇರುತ್ತಿದ್ದ  ಮೂರು ವ್ಯಕ್ತಿಗಳನ್ನು  ಬರ್ಬರವಾಗಿ ಹತ್ಯೆ ಮಾಡಿ ಹುಂಡಿಯ ಹಣ ದೋಚಿರುತ್ತಾರೆ, ಪ್ರಾಣ ಕಳೆದುಕೊಂಡ ಆ ಅಮಾಯಕರ  ಪ್ರಾಣ ರಕ್ಷಣೆಗೆ ಯಾವುದೇ ಸೂಕ್ತ ಒತ್ತು ನೀಡದೆ ಕೆಲಸಕ್ಕೆ ನೇಮಿಸಿಕೊಂಡದ್ದು ತಪ್ಪಲ್ಲವೇ?.

ದೇವಸ್ಥಾನದ, ಎ. ಟಿ. ಎಂ. ಗಳಲ್ಲಿನ ಯಾವುದೇ ಕಾವಲುಗಾರರ ಪ್ರಾಣ ರಕ್ಷಣೆಗೆ ಮಾಲೀಕರು ಒತ್ತು ನೀಡಬೇಕು. ಸತ್ತ ನಂತರ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುವುದು ಎಷ್ಟು ಸರಿ?.  ಹಣ ದೋಚಲು ಬಹಳಷ್ಟು ಕಾವಲುಗಾರರ ಕೊಲೆಗಳು ನಡೆಯುತ್ತಲೇ ಇರುತ್ತವೆ. ಹಾಗಿದ್ದರೂ ಅಮಾಯಕರ ಪ್ರಾಣ ರಕ್ಷಣೆಯ ವಿಚಾರದಲ್ಲಿ ಮಾತ್ರ  ಸಂಭಂದಿಸಿದವರ ನಿರ್ಲಕ್ಷ್ಯ ಖಂಡನೀಯ. ದೇವಸ್ಥಾನದ ಆದಾಯ ಮಾತ್ರ ಸಾಕು, ಅವರವರ ಸಂಪತ್ತು ರಕ್ಷಿಸಿದರೆ ಸಾಕು ಎಂಬ ನೀತಿ ತರವಲ್ಲ, ಸಂಪತ್ತಿನ ರಕ್ಷಣೆಗೆ ಕೊಡುವ ಪ್ರಾಮುಖ್ಯತೆ ಅಮಾಯಕರ ಪ್ರಾಣ ರಕ್ಷಣೆಗೂ ಕೊಡಲಿ.
-‌ಮಂಜುನಾಥ್ ಜೈನ್ ಎಂ. ಪಿ, ‌ಮಂಡ್ಯ 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.