ಉತ್ಸಾಹಿಗಳನ್ನು ಪ್ರೋತ್ಸಾಹಿಸಿ

7

ಉತ್ಸಾಹಿಗಳನ್ನು ಪ್ರೋತ್ಸಾಹಿಸಿ

Published:
Updated:

ಸರ್ಕಾರಿ ಶಾಲೆಗಳಿಗೆ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಆದರೆ ಶಿಕ್ಷಕರನ್ನು ವಿದೇಶಕ್ಕೆ ಕಳುಹಿಸುವ ಆಲೋಚನೆ ಮಾತ್ರ ಸರಿಯಲ್ಲ. ಇಂತಹ ಯೋಜನೆಗಳಿಗೆ ವೆಚ್ಚ ಮಾಡುವ ಹಣವನ್ನು ಸರ್ಕಾರಿ ಶಾಲೆಗಳ ಮೂಲ ಸೌಕರ್ಯಗಳನ್ನು ಹೆಚ್ಚಿಸಲು ವ್ಯಯಿಸುವುದು ಸೂಕ್ತ.

ನಮ್ಮಲ್ಲಿ ಕೆಲವು ಸರ್ಕಾರಿ ಶಾಲೆಗಳಲ್ಲಿ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಮತ್ತು ಹಲವಾರು ಉತ್ಸಾಹಿ ಯುವಕರು ಸ್ವಯಂಪ್ರೇರಿತರಾಗಿ ಇಂಗ್ಲಿಷ್‌ ಭಾಷೆಯ ಜೊತೆಗೆ ಸಂವಹನ ಕಲೆ ಮತ್ತು ಗಣಿತದ ಬೋಧನೆ ಮಾಡುತ್ತಿದ್ದಾರೆ.

ಸರ್ಕಾರವು ಇಂಥವರಿಗೆ ಗೌರವಧನ ನೀಡುವ ಮೂಲಕ ಇವರ ಸೇವೆಯನ್ನೂ ಬಳಸಿಕೊಳ್ಳಬಹುದು. ಅಂತಹ ಶಾಲೆಗಳಲ್ಲಿ ಓದುತ್ತಿರುವ ಸಾಕಷ್ಟು ಮಕ್ಕಳು ಖಾಸಗಿ ಶಾಲೆಯ ಮಕ್ಕಳನ್ನು ಮೀರಿಸುವಂತೆ ಕಲಿಯುತ್ತಿದ್ದಾರೆ ಎಂಬುದುನ್ನು ಸರ್ಕಾರ ಮನಗಾಣಬೇಕು.

ಬೆಂಗಳೂರು
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !