ಸೋಮವಾರ, ಅಕ್ಟೋಬರ್ 26, 2020
24 °C

ಇರಲಿ ಎಲ್ಲ ಅಧಿಕಾರಿಗಳಿಗೂ ಒಂದೇ ನ್ಯಾಯ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಮೈಸೂರಿನ ಜಿಲ್ಲಾಧಿಕಾರಿ ಬಿ.ಶರತ್ ಅವರನ್ನು ದಿಢೀರ್‌ ವರ್ಗಾವಣೆ ಮಾಡಿ ಆ ಜಾಗಕ್ಕೆ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ನೇಮಕ‌ ಮಾಡಿದೆ. ರೋಹಿಣಿ ಅವರು ಹಾಸನದ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ತಮ್ಮನ್ನು ದಿಢೀರನೆ ವರ್ಗಾವಣೆ ಮಾಡಿದ್ದ ಸಮ್ಮಿಶ್ರ ಸರ್ಕಾರದ ವಿರುದ್ಧ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಹಾಗೂ ಹೈಕೋರ್ಟ್‌ ಮೆಟ್ಟಿಲೇರಿ ಪುನಃ ಹಾಸನದ ಜಿಲ್ಲಾಧಿಕಾರಿಯಾಗಿ ವರದಿ ಮಾಡಿಕೊಂಡಿದ್ದರು.

ಅಂದು ರೋಹಿಣಿ ಅವರನ್ನು ದಿಢೀರ್‌ ವರ್ಗಾವಣೆ ಮಾಡಿದ ಕಾರಣಕ್ಕೆ ಎಚ್‌.ಡಿ.ರೇವಣ್ಣ ಅವರನ್ನು ಅಂದಿನ ವಿರೋಧ ಪಕ್ಷವಾದ ಬಿಜೆಪಿಯು ಟೀಕಿಸಿತ್ತು. ದಕ್ಷ ಅಧಿಕಾರಿ ಕೆಲಸ ಮಾಡಲು ರೇವಣ್ಣ ಅವರು ಬಿಡಲಿಲ್ಲವೆಂದು ಗಂಭೀರ ಆರೋಪ ಮಾಡಿತ್ತು. ಕಾಲಚಕ್ರ ಉರುಳಿದೆ, ಆಗ ಆರೋಪ ಮಾಡಿದ್ದ ಬಿಜೆಪಿ ಇಂದು ಅಧಿಕಾರದಲ್ಲಿ ಇದೆ. ಮೈಸೂರಿನ ಜಿಲ್ಲಾಧಿಕಾರಿಯಾಗಿ ವರದಿ ಮಾಡಿಕೊಂಡು ತಿಂಗಳು ಕಳೆಯುವ ಮುನ್ನವೇ ಶರತ್ ಅವರನ್ನು ಸರ್ಕಾರ ದಿಢೀರ್‌ ವರ್ಗಾವಣೆ ಮಾಡಿದೆ. ಇದು ಆಕ್ಷೇಪಾರ್ಹ.

ರಾಜಕೀಯ ಪಕ್ಷಗಳಿಗೆ ಅಧಿಕಾರವಿದ್ದಾಗ ಒಂದು ಸಿದ್ಧಾಂತ, ಅಧಿಕಾರವಿಲ್ಲದಿದ್ದಾಗ ಒಂದು ಸಿದ್ಧಾಂತ ಇರುತ್ತದೆ ಎಂಬುದು ಈ ವಿಷಯದಿಂದ ತಿಳಿಯುತ್ತದೆ. ಎಲ್ಲ ಅಧಿಕಾರಿಗಳಿಗೂ ಒಂದೇ ನ್ಯಾಯ ಇದ್ದರೆ ಮಾತ್ರ ಸರ್ಕಾರದಲ್ಲಿ ನಾವು ಪಕ್ಷಾತೀತ‌ ನಿಲುವನ್ನು ಕಾಣಲು ಸಾಧ್ಯ.

ಲಕ್ಷ್ಮೀಕಾಂತರಾಜು ಎಂ.ಜಿ., ಮಠ ಗ್ರಾಮ, ಗುಬ್ಬಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.