ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಥೆನಾಲ್ ಉತ್ಪಾದನೆ: ಹಲವು ಸಮಸ್ಯೆಗೆ ಪರಿಹಾರ

Last Updated 25 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಕಬ್ಬು ನುರಿಸುವ ಹಂಗಾಮು ಈಗಾಗಲೇ ಪ್ರಾರಂಭವಾಗಿದ್ದು, ಈ ವರ್ಷ ಸಹ ಕಬ್ಬಿನ ಬೆಲೆ ನಿಗದಿ ವಿಚಾರವಾಗಿ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ನಡುವೆ ಸಂಘರ್ಷಗಳು ನಡೆಯುತ್ತಿವೆ. ಬೇಡಿಕೆಗಿಂತ ಉತ್ಪಾದನೆ ಹೆಚ್ಚಾಗಿರುವುದು ಹಾಗೂ ಕಬ್ಬಿನ ವಿವಿಧ ಉತ್ಪನ್ನಗಳಿಗೆ ಸ್ಥಿರವಾದ ಬೆಲೆ ಇಲ್ಲದ ಕಾರಣ ಸಕ್ಕರೆ ಉದ್ಯಮವು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದೆ. ಇದರಿಂದಾಗಿ ಕಬ್ಬು ಬೆಳೆಗಾರರಿಗೆ ಯೋಗ್ಯ ದರ ನೀಡುವಷ್ಟು ಕಾರ್ಖಾನೆಗಳೂ ಸಶಕ್ತವಾಗಿಲ್ಲ. ಹಾಗಾಗಿ ಎಥೆನಾಲ್ ಉತ್ಪಾದಿಸಿದರೆ ಸಕ್ಕರೆ ಕಾರ್ಖಾನೆಗಳ ವರಮಾನ ಹೆಚ್ಚುತ್ತದೆ.

ಕೇಂದ್ರ ಸರ್ಕಾರವು ಎಥೆನಾಲ್ ಬಳಕೆ ಹೆಚ್ಚಿಸಲು 2025ರ ಒಳಗಾಗಿ ಪೆಟ್ರೋಲ್, ಡೀಸೆಲ್‌ನಲ್ಲಿ ಸುಮಾರು
ಶೇ 30ರಷ್ಟು ಎಥೆನಾಲ್ ಬೆರೆಸುವ ಗುರಿ ಹಾಕಿಕೊಂಡಿದೆ. ಇದು ಸಾಧ್ಯವಾದರೆ ಕಚ್ಚಾ ತೈಲದ ಆಮದು ಅವಲಂಬನೆ ಕಡಿಮೆಯಾಗುತ್ತದೆ. ಪರೋಕ್ಷವಾಗಿ ಸಕ್ಕರೆ ಕಾರ್ಖಾನೆಗಳ ವರಮಾನ ಹೆಚ್ಚಾಗುವುದರ ಜೊತೆಗೆ ರೈತರ ಕಬ್ಬಿನ ಬೆಳೆಗೂ ನ್ಯಾಯಯುತ ಬೆಲೆ ನೀಡಲು ಸಾಧ್ಯವಾಗುತ್ತದೆ. ಹಾಗೆಯೇ ಸಕ್ಕರೆ ಕಾರ್ಖಾನೆಗಳಲ್ಲಿ ವರ್ಷಕ್ಕೆ 5-6 ತಿಂಗಳಷ್ಟೇ ಕೆಲಸ ಇರುತ್ತದೆ. ಎಥೆನಾಲ್ ಉತ್ಪಾದನೆ ಆರಂಭಿಸಿದರೆ ನೌಕರರಿಗೆ ವರ್ಷವಿಡೀ ಕೆಲಸ ದೊರೆಯುತ್ತದೆ.

ಬಾಬು ಶಿರಮೋಜಿ,ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT