ಗುರುವಾರ , ಸೆಪ್ಟೆಂಬರ್ 19, 2019
26 °C

ಅದೇ ಲೋಕ, ಅದೇ ಕಾಲ

Published:
Updated:

‘ಸಮಾಜ ಕೆಟ್ಟಿಲ್ಲ: ಬದಲಾಗಲಿ ದೃಷ್ಟಿಕೋನ’ ಎಂಬ ಜಯಂತ್ ಕೆ.ಎಸ್. ಅವರ ಲೇಖನ (ಸಂಗತ, ಆ. 21) ಓದಿದಾಗ ‘ಕಾಲ ಕೆಟ್ಟಿತೆಂದು ಹೇಳುತ್ತಾರೆ. ಆದರೆ ಕಾಲ ಕೆಡದು, ಅದೇ ಸೂರ್ಯ– ಚಂದ್ರರು, ಅದೇ ಭೂಮಿ, ಅದೇ ಲೋಕ, ಅದೇ ಕಾಲ. ಆದರೆ ಕೆಡುವುದು ಜನರ ನಡೆ ನುಡಿ ಮಾತ್ರ’ ಎಂಬ ಸ್ವಾಮಿ ವಿವೇಕಾನಂದರ ಮಾತು ನೆನಪಾಯಿತು. ಎಷ್ಟೋ ವರ್ಷಗಳಿಂದಲೂ ಜೀವನ ಮೌಲ್ಯಗಳು ತಮ್ಮದೇ ಆದ ರೀತಿ ನೀತಿಯಲ್ಲಿ, ಚೌಕಟ್ಟಿನಲ್ಲಿ ಉಳಿಯುತ್ತಾ, ಬೆಳೆಯುತ್ತಾ ಬಂದಿವೆ.

‘ಕಾಲ ಕೆಟ್ಟೋಗಿದೆ’ ಎಂಬುದು, ಜನ ಸೇರಿದಾಗ ಆಡಿಕೊಳ್ಳುವ ಕಾಯಂ ಮಾತಾಗಿಬಿಟ್ಟಿದೆ. ಸಾಹಿತ್ಯದ ವಿಷಯ ಬಂದಾಗ ಸಾಹಿತ್ಯ ಕೆಟ್ಟೋಗಿದೆ, ಮೌಲ್ಯ ಕಳೆದುಕೊಂಡಿದೆ ಎನ್ನುವುದು, ಸಂಗೀತದ ವಿಷಯ ಬಂದಾಗಲೂ ಹೀಗೇ ಹೇಳುವುದು... ಯಾವುದೂ ನಾವು ಅಂದುಕೊಂಡಿರುವ ರೀತಿಯಲ್ಲಿ ಅಸ್ತಿತ್ವ ಕಳೆದುಕೊಂಡಿಲ್ಲ. ಸಾಹಿತ್ಯ– ಸಂಗೀತ ಕ್ಷೇತ್ರಗಳು ಚೆನ್ನಾಗಿಯೇ ಬೆಳೆಯುತ್ತಿವೆ. ಕಾಲ ಬದಲಾದಂತೆ ಬದಲಾವಣೆ ಸಹಜ. ಒಳಿತು ಕೆಡುಕುಗಳು ಎಲ್ಲದರಲ್ಲೂ ಇದ್ದದ್ದೇ. ಇನ್ನು ಮಾನವೀಯತೆಯ ಉಳಿವಿಗೆ, ಇತ್ತೀಚಿನ ಪ್ರವಾಹದ ಸಂದಭ೯ದಲ್ಲಿ ಹರಿದುಬಂದ ಅದೆಷ್ಟೋ ಸಹಾಯಹಸ್ತಗಳೇ ಸಾಕ್ಷಿ. ಒಟ್ಟಿನಲ್ಲಿ ಸಕಾರಾತ್ಮಕವಾಗಿ ನೋಡುವ ದೃಷ್ಟಿಕೋನ ಬಹು ಮುಖ್ಯ.

ತಾರಾ ಹೆಗಡೆ, ಶಿರಸಿ

Post Comments (+)