ಸೋಮವಾರ, ಡಿಸೆಂಬರ್ 16, 2019
17 °C

‘ಲಿಂಗಾಯತರು ಸಹ ಹಿಂದೂಗಳು’  | ಇಷ್ಟಲಿಂಗವು ಶಿವನ ರೂಪವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಲಿಂಗಾಯತರು ಸಹ ಹಿಂದೂಗಳು’ ಎಂದು ಹೇಳಿರುವ ಪೇಜಾವರ ಶ್ರೀಗಳು, ಈ ಕುರಿತ ಬಹಿರಂಗ ಚರ್ಚೆಗೆ ಪಂಥಾಹ್ವಾನ ನೀಡಿದ್ದಾರೆ (ಪ್ರ.ವಾ., ಜುಲೈ 31). ಶಿವಲಿಂಗ ಹಾಗೂ ಇಷ್ಟಲಿಂಗವು ಶಿವನ ರೂಪವೇ ಆಗಿದ್ದು ಅವುಗಳನ್ನು ಆರಾಧಿಸುವವರೆಲ್ಲರೂ ಹಿಂದೂಗಳೇ ಎಂಬುದು ಅವರ ಅಭಿಮತ. ಇಷ್ಟಲಿಂಗವು ಶಿವನ ರೂಪ ಹಾಗೂ ಅದು ದೇವರ ಪ್ರತೀಕ ಎಂದು ಅವರು ತಿಳಿದಂತಿದೆ. ಬಸವಪ್ರಣೀತ ಇಷ್ಟಲಿಂಗವು ಶಿವನ ರೂಪವೂ ಅಲ್ಲ, ದೇವರೂ ಅಲ್ಲ. ಅದು ನಿರಾಕಾರದ ಹಾಗೂ ಸಮಸ್ತವನ್ನೂ ಒಂದುಗೊಳ್ಳುವುದರ ಪ್ರತೀಕ. ಇಷ್ಟಲಿಂಗವು ನಿರಾಕಾರದ ಸ್ವರೂಪದೊಡನೆ ಏಕಾಗ್ರತೆಯಿಂದ ಒಂದುಗೊಳ್ಳುವ ಪ್ರಕ್ರಿಯೆ. ಅದು ಹಿಂದೂ ಧರ್ಮದ ಬಹುಮುಖ್ಯ ಅಂಶವಾದ ಗರ್ಭಗುಡಿ ಕಲ್ಪನೆಯ ವಿರೋಧದ ಪ್ರತೀಕ.

ಶ್ರೀಗಳು 12ನೇ ಶತಮಾನದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಹಿತ್ಯಿಕ ವಿಷಯಗಳನ್ನು, ಸಮಸ್ತ ವಚನ ಸಾಹಿತ್ಯವನ್ನು ಸರಿಯಾಗಿ ಗ್ರಹಿಸಬೇಕಾದ ಅಗತ್ಯವಿದೆ. ಆಗ ಆ ಅರಿವೇ ಗುರುವಾಗಿ, ಲಿಂಗಾಯತ ಏಕೆ ಹಿಂದೂ ಧರ್ಮವಲ್ಲ ಎಂಬುದು ತನ್ನಷ್ಟಕ್ಕೆ ತಾನೆ ಅವರಿಗೇ ತಿಳಿಯುತ್ತದೆ.

-ಹಾರವ್ ಆರ್., ಬೆಂಗಳೂರು

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು