ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲಿ ಪರೀಕ್ಷೆ: ಯಾರಿಗೆ ಲಾಭ?

Last Updated 8 ಜುಲೈ 2019, 20:00 IST
ಅಕ್ಷರ ಗಾತ್ರ

ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಪರೀಕ್ಷೆ ಬರೆಯಲು ಸರ್ಕಾರ ಅವಕಾಶ ಕಲ್ಪಿಸಿದೆ. ರಾಜ್ಯದಲ್ಲಿ ಕನ್ನಡಕ್ಕೆ ಒದಗಿರುವ ದುಃಸ್ಥಿತಿಯನ್ನು ನೆನೆದರೆ, ಕನ್ನಡದಲ್ಲಿ ಬ್ಯಾಕಿಂಗ್ ಪರೀಕ್ಷೆ ನಡೆಸುವುದರಿಂದ ಯಾರಿಗೆ ಲಾಭವಾದೀತು ಎಂಬ ಪ್ರಶ್ನೆ ಮೂಡುತ್ತದೆ. ಕನ್ನಡ ಶಾಲೆಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಕನ್ನಡ ಭಾಷೆಯ ಕಲಿಕೆ ಕ್ರಮೇಣ ಕುಂಠಿತವಾಗುತ್ತಿದೆ. ಪೋಷಕರು ತಮ್ಮ ಮಕ್ಕಳಿಂದ ಇಂಗ್ಲಿಷ್ ಜಪ ಮಾಡಿಸುತ್ತಿರುವ ಈ ಕಾಲದಲ್ಲಿ ಕನ್ನಡಕ್ಕೆ ಉಳಿಗಾಲವೆಲ್ಲಿದೆ? ಇಂದಿನ ಬಹುತೇಕ ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲೂ ಖಾಸಗಿ ಶಾಲೆಗಳಿಗೆ ಸ್ಪರ್ಧೆ ಒಡ್ಡಲಾಗದೆ ಸರ್ಕಾರವೇ ಒಂದೆಡೆ ಇಂಗ್ಲಿಷ್‌ ಮಾಧ್ಯಮ ತರಗತಿಗಳನ್ನು ಶುರು ಮಾಡಿದೆ. ಇನ್ನೊಂದೆಡೆ, ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆಯನ್ನು ಬೆಂಬಲಿಸುವುದು ವ್ಯಂಗ್ಯವಲ್ಲವೇ? ಕನ್ನಡದಲ್ಲಿಯ ಬೇರು ಗಟ್ಟಿಗೊಳ್ಳದೆ, ಇಂತಹ ಕ್ಲಿಷ್ಟ ಪರೀಕ್ಷೆಗೆ ಮಕ್ಕಳನ್ನು ಸಿದ್ಧಗೊಳಿಸುವುದು ಹೇಗೆ? ಮೊದಲು ತಳದಲ್ಲಿ ಕನ್ನಡವನ್ನು ಬಲಗೊಳಿಸಿ ನಂತರ ಉನ್ನತ ಹಂತದಲ್ಲಿ ಕನ್ನಡವನ್ನು ಅಳವಡಿಸಿಕೊಳ್ಳುವುದು ಸೂಕ್ತ.

-ಅಂಬಿ ಎಸ್. ಹೈಯ್ಯಾಳ್, ಮುದನೂರ ಕೆ., ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT