ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ಶಿಕ್ಷಣ: ವೈಜ್ಞಾನಿಕ ಪಠ್ಯವಿರಲಿ

Last Updated 20 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮಹಿಳೆಯರ ವಿವಾಹದ ವಯಸ್ಸಿನ ಕನಿಷ್ಠ ಮಿತಿಯನ್ನು ಏರಿಸಲು ಸರ್ಕಾರ ನಿರ್ಧರಿಸಿದೆ. ಈ ಕುರಿತು ವಿಶ್ಲೇಷಿಸಿರುವ ಡಾ. ಕೆ.ಎಸ್ ಪವಿತ್ರ ಅವರು (ಪ್ರ.ವಾ., ಡಿ. 20) ಶಾಲಾ ಕಾಲೇಜುಗಳಲ್ಲಿ ಕೌಟುಂಬಿಕ ಶಿಕ್ಷಣದ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ. ಇದು ತುಂಬಾ ಗಮನಾರ್ಹವಾದ ವಿಚಾರ. ಸಾಮಾನ್ಯವಾಗಿ ಪ್ರಾಥಮಿಕ ಹಂತದ ಶಾಲಾ ಪಠ್ಯಗಳಲ್ಲಿ ಕುಟುಂಬ, ವಿಭಕ್ತ ಹಾಗೂ ಅವಿಭಕ್ತ ಕುಟುಂಬಗಳ ಅರ್ಥವನ್ನು ಮಾತ್ರ ತಿಳಿಸಲಾಗುತ್ತದೆ. ಆದರೆ ಮಾಧ್ಯಮಿಕ ಹಂತದ ನಂತರ ಕೌಟುಂಬಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ವೈಜ್ಞಾನಿಕ ಪಠ್ಯಗಳಿಲ್ಲ. ಆರೋಗ್ಯಕರ ಕುಟುಂಬ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಮಕ್ಕಳಲ್ಲಿ ಅಳವಡಿಸಲು ಈ ಆಧುನಿಕ ಕಾಲಘಟ್ಟದಲ್ಲಿ ಕೆಲವು ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಮಕ್ಕಳು ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ ಕುಟುಂಬ ನಿರ್ವಹಣೆ ಮಾಡಲು ಇದು ಕೂಡ ತೊಡಕಾಗುತ್ತದೆ.

ಆದ್ದರಿಂದ ಬದಲಾದ ಸನ್ನಿವೇಶದಲ್ಲಿ ಕೌಟುಂಬಿಕ ಜವಾಬ್ದಾರಿ ಮತ್ತು ಮಹತ್ವಗಳನ್ನು ಪಠ್ಯಗಳಲ್ಲಿ ವೈಜ್ಞಾನಿಕವಾಗಿ ಅಳವಡಿಸುವುದರಿಂದ ಸ್ವಸ್ಥ ಹಾಗೂ ಲಿಂಗ ಸಮಾನತೆಯ ಸಮಾಜವನ್ನು ರೂಪಿಸಲು ಸಾಧ್ಯ.

–ಸುವರ್ಣ ಸಿ.ಡಿ., ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT