ಬೆಳೆ ವಿಮೆ ಅನ್ಯಾಯ

7

ಬೆಳೆ ವಿಮೆ ಅನ್ಯಾಯ

Published:
Updated:

ಹಿರಿಯೂರು ತಾಲ್ಲೂಕಿನಲ್ಲಿ ಎಂಟು- ಹತ್ತು ವರ್ಷಗಳಿಂದ ಬರಗಾಲವಿದೆ. ಇಲ್ಲಿನ ರೈತರು ಪ್ರಧಾನಮಂತ್ರಿಗಳ ಫಸಲ್ ಬಿಮಾ ಯೋಜನೆಯಡಿ ತಮ್ಮ ಬೆಳೆಗೆ ವಿಮೆ ಮಾಡಿಸಿ, ಕಂತುಗಳನ್ನು ಕಟ್ಟಿದ್ದಾರೆ. 2017-18ರ ಮುಂಗಾರಿನಲ್ಲಿ ಶೇಂಗಾ ಬೆಳೆಗೆ ರೈತರು ವಿಮೆ ಮಾಡಿಸಿ ಕಂತು ಕಟ್ಟಿರುತ್ತಾರೆ.

ತಾಲ್ಲೂಕಿನಲ್ಲಿ ಯಾವ ಬೆಳೆಯನ್ನು ವಿಮೆಗೆ ಪರಿಗಣಿಸಲಾಗಿದೆ ಎಂದು ಈಗ ಹೋಗಿ ವಿಚಾರಿಸಿದರೆ, ‘ಧರ್ಮಪುರ ಹೋಬಳಿಯಲ್ಲಿ ಭತ್ತ, ಹತ್ತಿ ಮತ್ತು ರಾಗಿ ಬೆಳೆಗಳು ವಿಮೆಗೆ ಒಳಪಟ್ಟಿವೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿಚಿತ್ರವೆಂದರೆ ಇತಿಹಾಸದಲ್ಲಿ ಎಂದೂ ಈ ತಾಲ್ಲೂಕಿನಲ್ಲಿ ಮಳೆಯಾಶ್ರಿತ ಬೆಳೆ ಭತ್ತಕ್ಕಾಗಲೀ ಹತ್ತಿಗಾಗಲೀ ವಿಮೆ ಮಾಡಿಸಿದ್ದಿಲ್ಲ. ಈ ಬಾರಿ ಭತ್ತ, ಹತ್ತಿ, ರಾಗಿಗೆ ವಿಮೆ ಮಾಡಿಸಿದ್ದು ಅವೈಜ್ಞಾನಿಕ, ಅವಿವೇಕ ಹಾಗೂ ದುರುದ್ದೇಶದ ನಿರ್ಧಾರ. ಜನಪ್ರತಿನಿಧಿಗಳು, ರೈತಸಂಘಗಳು ಸೇರಿ ರೈತರಿಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು.

ಎಂ. ಮುದ್ದಣ್ಣ, ಮದ್ದಿಹಳ್ಳಿ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !