ಶುಕ್ರವಾರ, ಆಗಸ್ಟ್ 23, 2019
21 °C

ಕೊರಳಿಗೆ ಉರುಳಾಗುವ ವಿಜೃಂಭಣೆ ಬೇಕೆ?

Published:
Updated:

ಇತ್ತೀಚೆಗೆ ರೈತರ ಆತ್ಮಹತ್ಯೆಗಳ ಸಂಖ್ಯೆ ವಿಶೇಷವಾಗಿ ಮಂಡ್ಯ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಬೆಳೆ ನಷ್ಟ, ಸೂಕ್ತ ಬೆಂಬಲ ಬೆಲೆ ಸಿಗದಿರುವುದು, ಬಡತನ, ಕುಟುಂಬ ಕಲಹ ಮುಂತಾದ ಕಾರಣಗಳು ಮೇಲ್ನೋಟಕ್ಕೆ ಗೋಚರಿಸುತ್ತವೆ. ಆದರೆ ಬಹುಮುಖ್ಯವಾಗಿ ಬೆಳಕಿಗೆ ಬಾರದ ಮತ್ತೊಂದು ಕಾರಣ ನಮ್ಮ ಮುಂದಿದೆ, ಅದುವೇ ಮದುವೆ!

ಪ್ರತಿಷ್ಠೆಗೋ ತೋರ್ಪಡಿಕೆಗೋ, ವರ– ವಧುವಿನ ಕಡೆಯವರ ಒತ್ತಾಯ, ಒತ್ತಾಸೆಗೋ ಬಲಿಯಾಗಿ ಮಗಳ ಮದುವೆಯನ್ನು ವಿಜೃಂಭಣೆಯಿಂದ ಮಾಡಿ ಮುಗಿಸುತ್ತಾರೆ.

ಮದುವೆಯ ಜವಾಬ್ದಾರಿಯೇನೋ ಮುಗಿಯುತ್ತದೆ. ಆದರೆ ಸಾಲದ ಹೊರೆ? ಅರ್ಧದಷ್ಟು ಆಯಸ್ಸನ್ನು ಸಾಲ ತೀರಿಸುವುದರಲ್ಲೇ ಕಳೆದು, ಕಡೆಗೂ ಅದನ್ನು ತೀರಿಸಲಾಗದೆ ಸಮಾಜಕ್ಕೆ ಹೆದರಿ ತನ್ನನ್ನು ತಾನೇ ಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಜನ ಬಂದು ತಲುಪುತ್ತಾರೆ. ವಿಜೃಂಭಣೆಗೆ ಕಡಿವಾಣ ಹಾಕಿ, ಸರಳ ವಿವಾಹಗಳತ್ತ ಸಾಗಿದರೆ ಕುಟುಂಬಗಳು ನೆಮ್ಮದಿಯಿಂದ ಬದುಕಬಹುದು.

- ಪಾಂಡು ಎಸ್., ಕೆ.ಆರ್‌.ಪೇಟೆ

Post Comments (+)