ರೈತರ ಸಾಲಮನ್ನಾ: ಪ್ರಚಾರ ಮಾತ್ರವೇ?

7

ರೈತರ ಸಾಲಮನ್ನಾ: ಪ್ರಚಾರ ಮಾತ್ರವೇ?

Published:
Updated:

ರಾಜ್ಯದ ಸಮ್ಮಿಶ್ರ ಸರ್ಕಾರವು ರೈತರ ಸಾಲಮನ್ನಾ ಮಾಡುವ ಘೋಷಣೆ ಮಾಡಿ ಹಲವು ದಿನಗಳಾದರೂ ಇದರ ಪ್ರಯೋಜನ ಇನ್ನೂ ರೈತರಿಗೆ ಸಿಕ್ಕಿಲ್ಲ.

ಮೊದಲು, ಠೇವಣಿ ಇದ್ದವರಿಗೆ ಠೇವಣಿ ಕಳೆದು, ಉಳಿದ ಮೊತ್ತದ ಸಾಲವನ್ನು ಮನ್ನಾ ಮಾಡಲಾಗುವುದು ಎಂದಿದ್ದರು. ಅದಕ್ಕೆ ವಿರೋಧ ಬಂದ ಬಳಿಕ, ಆ ನಿಯಮವನ್ನು ಸಡಿಲಿಸಲಾಯಿತು. ಈಗ ಪಡಿತರ ಚೀಟಿ, ವಂಶವೃಕ್ಷ ಮತ್ತು ಆಧಾರ್ ಕಾರ್ಡ್ ಜೋಡಣೆ ಎಂದೆಲ್ಲ ಷರತ್ತು ವಿಧಿಸಿ, ಸಾಲಮನ್ನಾ ಎಂಬ ಕನ್ನಡಿಯೊಳಗಿನ ಗಂಟನ್ನು ಸರ್ಕಾರ ತೋರಿಸುತ್ತಿದೆ.

ಸಾಲಮನ್ನಾ ಮಾಡುವ ಮನಸ್ಸು ಸರ್ಕಾರಕ್ಕೆ ಇದ್ದರೆ ಹೀಗೆ ಷರತ್ತುಗಳನ್ನು ವಿಧಿಸುತ್ತ ಕಾಲಹರಣ ಮಾಡುತ್ತಿರಲಿಲ್ಲ. ಸಾಲ ಮನ್ನಾದ ಲಾಭ ಇನ್ನೂ ರೈತರಿಗೆ ತಲುಪಿಲ್ಲವಾದರೂ ‘ಅಷ್ಟು ಮನ್ನಾ ಮಾಡಿದ್ದೇವೆ, ಇಷ್ಟು ಮನ್ನಾ ಮಾಡಿದ್ದೇವೆ’ ಎಂದು ಸರ್ಕಾರ ಹೇಳಿಕೊಳ್ಳುವುದು ಸುಳ್ಳು ಹೇಳಿದಂತಲ್ಲವೇ?

ಎಷ್ಟೋ ರೈತರ ಮಕ್ಕಳು, ಅವಲಂಬಿತರು ಉದ್ಯೋಗ ಅರಸಿ ಹೊರಹೋದರೆ ಮನೆಗೆ ಸಂಬಂಧವಿಲ್ಲದಂತೆ ಇರುತ್ತಾರೆ. ಪಡಿತರ ಚೀಟಿಯಲ್ಲೋ, ವಂಶವೃಕ್ಷದಲ್ಲೋ ಇಂಥವರ ಹೆಸರಿದೆ ಎಂದ ಮಾತ್ರಕ್ಕೆ ಬಡ ರೈತರನ್ನು ಸೌಲಭ್ಯದಿಂದ ವಂಚಿತರಾಗಿಸುವುದು ಸರಿಯಲ್ಲ.

–ಆರ್‌.ವಿ. ಹೆಗಡೆ ಚಿಪಗಿ, ಶಿರಸಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !