ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸುರಕ್ಷತೆ– ಬೇಕು ರೈತರಿಗೆ ತರಬೇತಿ

Last Updated 1 ಜೂನ್ 2022, 19:30 IST
ಅಕ್ಷರ ಗಾತ್ರ

ಕೋಲಾರ ಜಿಲ್ಲೆಯ ಗ್ರಾಮವೊಂದರ ಜಮೀನಿನಲ್ಲಿ ಇತ್ತೀಚೆಗಷ್ಟೇ ರೈತ ಮಹಿಳೆಯೊಬ್ಬರು ಆಕಸ್ಮಿಕವಾಗಿ ಟ್ರ್ಯಾಕ್ಟರ್- ರೋಟರ್‌ಗೆ ಸಿಲುಕಿ ಮೃತಪಟ್ಟ ಘಟನೆಯ (ಪ್ರ.ವಾ., ಮೇ 30) ಬೆನ್ನಲ್ಲೇ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಜಮೀನು ಉಳುಮೆ ಮಾಡುವಾಗ ಆಯತಪ್ಪಿ ಟ್ರ್ಯಾಕ್ಟರ್- ರೋಟರ್‌ಗೆ ಸಿಲುಕಿದ ರೈತನ ದೇಹ ಛಿದ್ರವಾದ ಬಗ್ಗೆ ವರದಿಯಾಗಿದೆ (ಪ್ರ.ವಾ., ಜೂನ್ 1). ಇನ್ನು ಕೃಷಿ ಹೊಂಡಕ್ಕೆ ಬಿದ್ದು ಜೀವ ಕಳೆದುಕೊಂಡ ಅನೇಕ ಘಟನೆಗಳು ಆಗಿಂದಾಗ್ಗೆ ವರದಿಯಾಗುತ್ತಲೇ ಇರುತ್ತವೆ. ಇವಲ್ಲದೆ ರೈತರು ಸ್ವರಕ್ಷಣಾ ಸಾಧನಗಳನ್ನು ಉಪಯೋಗಿಸದೆ ಕ್ರಿಮಿ, ಕೀಟ ಹಾಗೂ ಕಳೆನಾಶಕಗಳಂಥ ಅಪಾಯಕಾರಿ ರಾಸಾಯನಿಕಗಳನ್ನು ಬೆಳೆಗಳಿಗೆ ಸಿಂಪಡಿಸುವಾಗ ರಾಸಾಯನಿಕಗಳು ಕೃಷಿಕನ ದೇಹವನ್ನು ಸೇರಿ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿವೆ. ಇಂಥ ಅನೇಕ ಘಟನೆಗಳು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ಸುರಕ್ಷತೆಗೆ ನಾವು ಒತ್ತು ನೀಡುತ್ತಿಲ್ಲ ಎಂಬುದಕ್ಕೆ ನಿದರ್ಶನಗಳು.

ಆಧುನಿಕ ಕೃಷಿ ಚಟುವಟಿಕೆಯಲ್ಲಿ ಯಂತ್ರಗಳು ಹಾಗೂ ರಾಸಾಯನಿಕಗಳ ಬಳಕೆ ಅವಶ್ಯವಾದರೂ ಅವುಗಳನ್ನು ಬಳಸುವ ವೇಳೆ ವಹಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ರೈತರಿಗೆ ಅಗತ್ಯ ಶಿಕ್ಷಣ ನೀಡುವ ವ್ಯವಸ್ಥೆ ಬೇಕಲ್ಲವೇ? ಆದ್ದರಿಂದ, ಸುರಕ್ಷಾ ತಜ್ಞರು ಮತ್ತು ಕೃಷಿ ವಿಜ್ಞಾನಿಗಳನ್ನು ಒಳಗೊಂಡ ‘ಇಂಟಿಗ್ರೇಟೆಡ್ ಅಪ್ರೋಚ್’ ಮಾದರಿಯನ್ನು ಸಿದ್ಧಪಡಿಸಿ ಪ್ರತೀ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರಿಗೆ ಕೃಷಿ ಹಾಗೂ ಕೃಷಿ ಸಂಬಂಧಿತ ಸುರಕ್ಷಾ ತರಬೇತಿ ಕಮ್ಮಟಗಳನ್ನು ಏರ್ಪಡಿಸಬೇಕು. ಆಗ ಸುರಕ್ಷತೆ ಬಗ್ಗೆ ಹೆಚ್ಚಿನ ಆರಿವು ಮೂಡಿಸಿದಂತೆ ಆಗುತ್ತದೆ ಹಾಗೂ ಇದರಿಂದ ಕೃಷಿ ಚಟುವಟಿಕೆಯಲ್ಲಿ ಜೀವಹಾನಿಯಂಥ ಅಪಘಾತಗಳು ಮತ್ತು ರಾಸಾಯನಿಕಗಳ ಅಸಮರ್ಪಕ ಬಳಕೆಯ ವಿಧಾನದಿಂದ ರೈತರು ದೀರ್ಘಕಾಲದ ಅನಾರೋಗ್ಯ ಅಥವಾ ಗಂಭೀರ ರೋಗಗಳಿಗೆ ತುತ್ತಾಗುವಂಥ ಅಪಾಯಗಳನ್ನು ತಡೆಯಬಹುದು.

- ಡಾ. ಜಿ.ಬೈರೇಗೌಡ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT