ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಮುಂಜಾಗ್ರತೆ ಇಲ್ಲದ ಅಸಡ್ಡೆಯ ನಡೆ

Last Updated 6 ಜೂನ್ 2022, 19:30 IST
ಅಕ್ಷರ ಗಾತ್ರ

ಈಗ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬೇಕಾದ ರಸಗೊಬ್ಬರದ ಬೆಲೆ ಬೇಕಾಬಿಟ್ಟಿ ಏರಿಕೆಯಾಗಿದೆ. ಕೃತಕ ಅಭಾವ ಸೃಷ್ಟಿಯಾಗಿದೆ. ಒಂದು ಕ್ವಿಂಟಲ್ ಭತ್ತಕ್ಕೆ ₹ 1500ರಿಂದ ₹ 2000. ಡಿಎಪಿ ಗೊಬ್ಬರ ಕ್ವಿಂಟಲ್‌ಗೆ ₹ 2,800. ಒಂದು ಕ್ವಿಂಟಲ್ ಗೊಬ್ಬರ ಕೊಳ್ಳಲು ಒಂದೂವರೆ ಕ್ವಿಂಟಲ್ ಭತ್ತ ಮಾರಬೇಕು! (ಪ್ರ.ವಾ., ಜೂನ್‌ 6).

ಇದರಿಂದ ಸಣ್ಣ, ಅತಿಸಣ್ಣ ರೈತರಿಗೆ ಆರ್ಥಿಕ ಹೊರೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳುವ ವೇಳೆಗೆ ಬಿತ್ತನೆ ಅವಧಿ ಮುಗಿದಿರುತ್ತದೆ! ಬಹುಶಃ ಸರ್ಕಾರವೇ ಎಲ್ಲಾ ರೈತರು ಸಾವಯವದತ್ತ ಮುಖ ಮಾಡಲಿ ಎಂದು ಈ ರೀತಿ ಮಾಡಿರಲೂಬಹುದು! ಪ್ರತಿವರ್ಷ ಮೇ- ಜೂನ್ ಬಿತ್ತನೆಗೆ ತಯಾರಿ ನಡೆಸುವ ಅವಧಿ ಎಂದು ಗೊತ್ತಿದ್ದೂ ಮುಂಜಾಗ್ರತೆ ತೆಗೆದುಕೊಳ್ಳದ ಸರ್ಕಾರದ ನಡೆ ಅಸಡ್ಡೆಯದು ಮತ್ತು ರೈತರ ಕಡೆಗಣನೆಯೇ ಸರಿ.

-ನಗರ ಗುರುದೇವ್ ಭಂಡಾರ್ಕರ್, ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT