ಚಿತ್ರೋತ್ಸವಕ್ಕೆ ಬಾಲಿವುಡ್‌ ಮೆರುಗಿರಲಿ

7

ಚಿತ್ರೋತ್ಸವಕ್ಕೆ ಬಾಲಿವುಡ್‌ ಮೆರುಗಿರಲಿ

Published:
Updated:

ಬೆಂಗಳೂರಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬಾಲಿವುಡ್ ತಾರೆಯರನ್ನು ಕರೆಸುವ ಪರಿಪಾಟವನ್ನು ನಿಲ್ಲಿಸಿ ಹಣ ಉಳಿತಾಯ ಮಾಡಲಾಗಿದೆ ಎಂದಿದ್ದಾರೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ. ಇದು ಚಿತ್ರಪ್ರೇಮಿಗಳು ಒಪ್ಪತಕ್ಕ ವಿಚಾರವಲ್ಲ. ನಮ್ಮ ಕನ್ನಡ ಚಲನಚಿತ್ರಗಳಲ್ಲಿ ಕನ್ನಡದ ಪ್ರತಿಭಾವಂತ ಕಲಾವಿದರು, ಗಾಯಕರು, ತಂತ್ರಜ್ಞರಿಗೆ ಆದ್ಯತೆ ನೀಡದೆ, ಪರಭಾಷಾ ಕಲಾವಿದರಿಗೆ ಮಣೆ ಹಾಕುವುದನ್ನು ಮೊದಲು ನಿಲ್ಲಿಸಿ, ಸ್ಥಳೀಯ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಬೇಕು.

ಆದರೆ, ‘ಅಂತರರಾಷ್ಟ್ರೀಯ’ ಶಿರೋನಾಮೆಯಡಿ ಪ್ರದರ್ಶನಗೊಳ್ಳುವ ಚಿತ್ರೋತ್ಸವಕ್ಕೆ ಒಂದಿಬ್ಬರು ಬಾಲಿವುಡ್ ತಾರೆಯರು ಬಂದು ಹೋದರೆ ಅದು ಬೇರೆ ರೀತಿಯ ಆಕರ್ಷಣೆ ತಂದು ಕಾರ್ಯಕ್ರಮದ ಯಶಸ್ಸಿಗೆ ಸಹಕಾರಿಯಾದೀತು. ಹಣ ನಿರೀಕ್ಷಿಸದ ಗುಣವುಳ್ಳ ಕಲಾವಿದರನ್ನು ಕರೆತರುವ ಪ್ರಯತ್ನ ಮಾಡಬಹುದಲ್ಲವೇ?

ಆರ್. ವೆಂಕಟರಾಜು, ಬೆಂಗಳೂರು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !