ಶನಿವಾರ, ಫೆಬ್ರವರಿ 22, 2020
19 °C

ಜನರ ಬಳಿ ಹಣ ಸುಳಿದಾಡುವಂತೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್ಥಿಕ ತಜ್ಞರ ವಿರೋಧದ ನಡುವೆಯೂ ನೋಟು ಅಮಾನ್ಯೀಕರಣ ಮತ್ತು ಜಿಎಸ್‌ಟಿಯಂತಹ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದರ ಪರಿಣಾಮವಾಗಿ, ಇಂದು ಗ್ರಾಹಕರು ಕೊಳ್ಳುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಕೈಗಾರಿಕೆಗಳು, ಜವಳಿ ಉದ್ಯಮಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿದ್ದರೂ ಸರ್ಕಾರ ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗುತ್ತಿದೆ. ಇದು ಹೀಗೇ ಮುಂದುವರಿದರೆ,  ಕೈಗಾರಿಕೆಗಳನ್ನು ಅವಲಂಬಿಸಿರುವ ಯುವಜನರ ಬದುಕು ಬೀದಿಪಾಲಾಗುತ್ತದೆ. ಆಗ ಸರ್ಕಾರವೇ ಅದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ.

ಪ್ರಸ್ತುತ ಆರ್ಥಿಕ ಹಿಂಜರಿತವು ನಮ್ಮ ಮುಂದಿರುವ ಸವಾಲಾಗಿರುವುದರಿಂದ, ಸರ್ಕಾರವು ಆರ್‌ಬಿಐನಿಂದ ಪಡೆದಿರುವ ಮೀಸಲು ನಿಧಿಯ ಹೆಚ್ಚುವರಿ ಮೊತ್ತವನ್ನು ನಷ್ಟದ ಸುಳಿಯಲ್ಲಿ ಸಿಲುಕಿರುವ ವಲಯಗಳ ಚೇತರಿಕೆಗೆ ಬಳಸಬೇಕು. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಪುನರ್ಧನ ಒದಗಿಸಬೇಕು. ಕಡಿಮೆ ಬಡ್ಡಿ ದರದಲ್ಲಿ ವಾಹನ ಖರೀದಿ ಸಾಲ ಹಾಗೂ ಗೃಹ ಸಾಲ ಸಿಗುವಂತೆ ಮಾಡಬೇಕು. ಈ ಮುಖಾಂತರ ಜನರ ಬಳಿ ದುಡ್ಡು ಸುಳಿದಾಡುವಂತೆ ಮಾಡಿ, ಆರ್ಥಿಕತೆ ಚೇತರಿಸಿಕೊಳ್ಳುವಂತೆ ನೋಡಿಕೊಳ್ಳಬೇಕು.

–ನಾಗರಾಜ್ ಗರಗ್, ಹೊಸದುರ್ಗ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು