ಎಲ್ಲರಿಗೂ ಧ್ವನಿಯಾಗಿ

7

ಎಲ್ಲರಿಗೂ ಧ್ವನಿಯಾಗಿ

Published:
Updated:

‘ಫೈರ್’ ಸಂಸ್ಥೆಯ ಸ್ಥಾಪಕರಾದ ನಟ ಚೇತನ್‌ ಅವರಿಗೊಂದು ಮನವಿ. ತಮ್ಮ ಸಂಸ್ಥೆಯ ಸ್ಥಾಪನೆ, ಅದರ ಉದ್ದೇಶ
ಗಳ ಬಗ್ಗೆ ಇತ್ತೀಚೆಗೆ ವಿವಿಧ ಸುದ್ದಿವಾಹಿನಿಗಳ ಮೂಲಕ ವಿವರಿಸಿದ್ದೀರಿ. ದೌರ್ಜನ್ಯಕ್ಕೆ ಒಳಗಾದ ನಟಿಯೊಬ್ಬರ ಪರ ತಾವು ಹೋರಾಟ ನಡೆಸುತ್ತಿರುವುದು ಸರಿಯಷ್ಟೆ.

ಚಿತ್ರರಂಗ ಮಾತ್ರವಲ್ಲ, ಇತರ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಕಿರುಕುಳ ಇದೆ. ಅವುಗಳ ವಿರುದ್ಧವೂ ನೀವೇಕೆ ಧ್ವನಿ ಎತ್ತಬಾರದು? ಕಚೇರಿ, ಶಾಲೆ, ವಿದ್ಯಾರ್ಥಿ ನಿಲಯಗಳಲ್ಲಿ ಮಹಿಳೆಯರು ಶೋಷಣೆಗೊಳಗಾಗುತ್ತಿದ್ದಾರೆ. ಶೋಷಣೆಯ ವಿರುದ್ಧ ಹೋರಾಡುವಷ್ಟು ಧೈರ್ಯ ಅವರಿಗಿಲ್ಲ. ಕೆಲಸ ಕಳೆದುಕೊಳ್ಳುವ ಭಯ ಹಾಗೂ ಇತರ ಅನೇಕ ಕಾರಣಗಳಿರಬಹುದು.

ತಾವು ಸ್ಥಳೀಯರ ಸಹಾಯ ಪಡೆದು, ಇಂಥ ಮಹಿಳೆಯರ ಪರವಾಗಿ ಹೋರಾಟ ಮಾಡಿದರೆ ಎಲ್ಲ ಸಹೋದ
ರಿಯರೂ ತಮಗೆ ಋಣಿಯಾಗಿರುತ್ತಾರೆ.

ಎಸ್. ಶೈಲಜಾ, ಬೆಂಗಳೂರು

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !