ಮೀನುಗಾರರ ನಾಪತ್ತೆ: ಗಂಭೀರವಾಗಿ ಪರಿಗಣಿಸಲಿ

7

ಮೀನುಗಾರರ ನಾಪತ್ತೆ: ಗಂಭೀರವಾಗಿ ಪರಿಗಣಿಸಲಿ

Published:
Updated:

ಒಂದು ತಿಂಗಳ ಹಿಂದೆ ನಮ್ಮ ಕರಾವಳಿ ಭಾಗದಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಯಾಂತ್ರೀಕೃತ ದೋಣಿ ಹಾಗೂ 7 ಮೀನುಗಾರರ ಸುಳಿವು ಇನ್ನೂ ಅಲಭ್ಯವಾಗಿದೆ. ನೌಕಾಪಡೆಯ ಹಡಗುಗಳು ಮಹಾರಾಷ್ಟ್ರ, ಗೋವಾ ಸೇರಿದಂತೆ ಸಮುದ್ರದ ತಳಮಟ್ಟದಲ್ಲೂ ಹಲವಾರು ದಿನಗಳಿಂದ ತೀವ್ರ ಶೋಧ ನಡೆಸಿದರೂ ಪ್ರಯೋಜನವಾಗಿಲ್ಲ. ಕಡಲ್ಗಳ್ಳರ ಹಾವಳಿ, ಉಗ್ರರ ಭೀತಿ ಜೊತೆಗೆ ಅಕ್ರಮ ನುಸುಳುವಿಕೆಗಳು ಪ್ರಮುಖವಾಗಿ ಸಮುದ್ರ ಮಾರ್ಗದಿಂದಲೇ ನಡೆದಿರುವ ಉದಾಹರಣೆಗಳಿವೆ. ಹೀಗಾಗಿ, ದೋಣಿ ಆಳ ಸಮುದ್ರದಲ್ಲಿ ಅವಘಡಕ್ಕೆ ತುತ್ತಾಗಿರುವ, ಇಲ್ಲವೇ ಉಗ್ರರು ಅಪಹರಿಸಿ ವಿಧ್ವಂಸಕ ಕೃತ್ಯಕ್ಕೆ ಬಳಸಿರುವ ಶಂಕೆಗಳು ಬಲವಾಗಿ ವ್ಯಕ್ತವಾಗುತ್ತಿವೆ.

ನಾಪತ್ತೆಯಾಗಿರುವ ಮೀನುಗಾರರ ಕುಟುಂಬಸ್ಥರು ಆತಂಕದಿಂದಲೇ ದಿನ ದೂಡುವಂತಾಗಿದೆ. ಜೀವದ ಹಂಗು ತೊರೆದು ಮೀನುಗಾರಿಕೆ ವೃತ್ತಿ ನಡೆಸುವ, ಒಂದರ್ಥದಲ್ಲಿ ಕಡಲತಡಿಯನ್ನು ಕಾಯುವ ಸೈನಿಕರೆಂದೇ ಕರೆಯಲಾಗುವ ಕಡಲ ಮಕ್ಕಳ ನಾಪತ್ತೆ ಪ್ರಕರಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು.

–ಆದರ್ಶ್ ಶೆಟ್ಟಿ, ಉಪ್ಪಿನಂಗಡಿ, ಪುತ್ತೂರು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !