ಬದಲಾವಣೆ ಬೇಡ

6

ಬದಲಾವಣೆ ಬೇಡ

Published:
Updated:

ಕರ್ನಾಟಕದ ಜನಸಂಖ್ಯೆ ಏಳು ಕೋಟಿಯ ಹತ್ತಿರ ತಲುಪಿದೆ. ರಾಜ್ಯದಲ್ಲಿ ಸುಮಾರು 1.50 ಲಕ್ಷ ಸರ್ಕಾರಿ ಹುದ್ದೆಗಳು ಬಹಳ ವರ್ಷಗಳಿಂದ ಖಾಲಿ ಇವೆ. ಸರ್ಕಾರ ಇವುಗಳನ್ನು ಭರ್ತಿ ಮಾಡಲು ಮುಂದಾಗುವುದಿಲ್ಲ ಎಂಬುದು ಸ್ಪಷ್ಟ. ಯಾಕೆಂದರೆ ಇವರಿಗೆ ನೀಡಬೇಕಾಗುವ ಸಂಬಳ– ಸಾರಿಗೆಯ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವ ತಂತ್ರಗಾರಿಕೆ ಇದರ ಹಿಂದೆ ಅಡಗಿದೆ.

ಈಗ ಇರುವ ಸಿಬ್ಬಂದಿಯೇ ರಾಜ್ಯದ ಸಮಸ್ತ ಜನರ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ. ಅವರೂ ಹೇಗೆ ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಿರುವಾಗ, ವಾರದಲ್ಲಿ ಐದು ದಿನ ಮಾತ್ರ ಕೆಲಸದ ಅವಧಿಯನ್ನು ನಿಗದಿ ಮಾಡಿದರೆ, ಮಲಗುವವರಿಗೆ ಸರ್ಕಾರವೇ ಹಾಸಿಗೆ ಹಾಸಿ ಕೊಟ್ಟಂತೆ ಆಗುತ್ತದೆ. ಆದ್ದರಿಂದ ಐದು ದಿನಗಳ ಕೆಲಸದ ಪ್ರಸ್ತಾವವನ್ನು ಕೈಬಿಡುವುದೇ ಶ್ರೇಯಸ್ಕರ.

 

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !