ಶುಕ್ರವಾರ, ಅಕ್ಟೋಬರ್ 18, 2019
20 °C

ದನಿ ಎತ್ತುವುದು ಅಪರಾಧವೇ?

Published:
Updated:

ನೆರೆ ಸಂತ್ರಸ್ತರ ಪರವಾಗಿ ಕೆಂದ್ರದಿಂದ ಪರಿಹಾರ ಕೋರಿ ದಿಟ್ಟವಾಗಿ ಮಾತನಾಡಿದ್ದಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿಯಿಂದ ನೋಟಿಸ್ ನೀಡಿ ಶಿಸ್ತುಕ್ರಮದ ಎಚ್ಚರಿಕೆ ನೀಡಲಾಗಿದೆ. ಇಂದಿರಾ ಗಾಂಧಿ ಅವರ ಆಡಳಿತದ ಕಾಲದಲ್ಲಿ ಭಾರಿ ಹೋರಾಟದ ನಂತರ ದಕ್ಷಿಣ ಭಾರತದಲ್ಲಿ ವಿಶಾಖಪಟ್ಟಣ, ಸೇಲಂ ಮತ್ತು ಕರ್ನಾಟಕದ ಹೊಸಪೇಟೆಯಲ್ಲಿ ಉಕ್ಕು ಕಾರ್ಖಾನೆಗೆ ಮಂಜೂರಾತಿ ನೀಡಲಾಗಿತ್ತು.

ವಿಶಾಖಪಟ್ಟಣ ಮತ್ತು ಸೇಲಂನಲ್ಲಿ ಉಕ್ಕು ಸ್ಥಾವರ ಆರಂಭಗೊಂಡರೂ ಹೊಸಪೇಟೆಯಲ್ಲಿ ಕೆಲಸ ಆರಂಭ ವಾಗಿರಲಿಲ್ಲ. ಅದನ್ನು, ಆಗ ಬಳ್ಳಾರಿಯ ಸಂಸದರಾಗಿದ್ದ ಆರ್‌.ವೈ.ಘೋರ್ಪಡೆಯವರು ಸಂಸತ್ ಎದುರು ಪ್ರತಿಭಟಿಸಿದ್ದರಿಂದ, ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲವಂತೆ.

ಮುಂದೆ ಹೊಸಪೇಟೆಯಲ್ಲಿ ಸರ್ಕಾರಿ ಸ್ವಾಮ್ಯದ ಉಕ್ಕಿನ ಕಾರ್ಖಾನೆ ಸ್ಥಾಪನೆಯಾಗದೆ, ಖಾಸಗಿ ಕಾರ್ಖಾನೆ ಆರಂಭವಾಗಿದ್ದು, ಘೋರ್ಪಡೆಯವರ ರಾಜಕೀಯ ಭವಿಷ್ಯ ಕಮರಿದ್ದು ಇತಿಹಾಸ. ದನಿ ಎತ್ತಿದ ಕಾರಣಕ್ಕಾಗಿ ಯತ್ನಾಳ್‌ ಅವರಿಗೆ ಅಂತಹ ಸ್ಥಿತಿ ಎದುರಾಗದಿರಲಿ.

–ರಮಾನಂದ ಶರ್ಮಾ, ಬೆಂಗಳೂರು

Post Comments (+)