ಶುಕ್ರವಾರ, ಮಾರ್ಚ್ 24, 2023
30 °C

ವಾಚಕರ ವಾಣಿ | ಲೋಕೋತ್ಸವದಲ್ಲಿ ಮೆರೆಯದ ಜನನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾನಪದ ಲೋಕದಲ್ಲಿ ಇತ್ತೀಚೆಗೆ ‘ಪ್ರವಾಸಿ ಜಾನಪದ ಲೋಕೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರಿಯೆ. ಹಾಡು  ಹಸೆ, ಮೇಳ, ನೃತ್ಯ ನಮ್ಮ ಜಾನಪದ ಪರಂಪರೆಯನ್ನು ಸಮರ್ಥವಾಗಿ ಬಿಂಬಿಸಿದವು. ಭಾಗವಹಿಸಿದ ಕಲಾವಿದರಿಗಷ್ಟೇ ಭೋಜನದ ಏರ್ಪಾಡಾಗಿತ್ತು. ಪ್ರೇಕ್ಷಕರು, ಅದರಲ್ಲೂ ದೂರದ ಊರುಗಳಿಂದ ಬಂದವರು ಈ ವ್ಯವಸ್ಥೆಯಿಲ್ಲದೆ ಪಾಡುಪಟ್ಟರು. ಹೆಚ್ಚಿನ ಸಂಖ್ಯೆಯಲ್ಲಿಲ್ಲದ ಪ್ರೇಕ್ಷಕರಿಗೆ ಸರಳವಾಗಿಯಾದರೂ ಊಟ ವಿತರಿಸಬಹುದಿತ್ತು.

‘ಬಾಯಾರಿ ಬಂದವರಿಗೆ ಒಂದು ಬಟ್ಟಲು ನೀರು, ಅಷ್ಟು ಅನ್ನ, ಎರಡು ಪ್ರೀತಿಯ ಮಾತು ಇತ್ತಲ್ಲಿ ಅಲ್ಲಿಯೇ ಕಲ್ಯಾಣ’ ಜನನುಡಿ ನೆನಪಾಯಿತು.
-ಬಿಂಡಿಗನವಿಲೆ ಭಗವಾನ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.