ಭಾನುವಾರ, ಜನವರಿ 19, 2020
19 °C

ಅರಣ್ಯವೆಂದರೆ ಗಿಡಮರಗಳ ಸಮೂಹವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದಲ್ಲಿ ವನಪ್ರದೇಶದ ವಿಸ್ತೀರ್ಣ ಹೆಚ್ಚಾಗಿದೆ ಎಂಬ ವರದಿ‌ ಓದಿದೆ (ಪ್ರ.ವಾ., ಡಿ. 30). ಆದರೆ ಅರಣ್ಯ ಪ್ರದೇಶದ ವಿಸ್ತೀರ್ಣವನ್ನು ಅಳೆಯುವಾಗ ಕಾಫಿ ತೋಟಗಳು, ರಬ್ಬರ್ ತೋಟಗಳನ್ನು ಪರಿಗಣಿಸಿರುವುದು‌‌ ಸರಿಯಲ್ಲ. ಇಲ್ಲಿ ಅರಣ್ಯದ ವ್ಯಾಖ್ಯಾನವೇ ಬದಲಾದಂತಿದೆ. ಅರಣ್ಯವೆಂದರೆ ಕೇವಲ ಗಿಡಮರಗಳ ಸಮೂಹವೇ?

ಒಂದು ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಮರಗಳು, ಬಳ್ಳಿಗಳು ಬೆಳೆದಿರಬೇಕು. ಅವುಗಳನ್ನು ಅವಲಂಬಿಸಿ ಬ್ಯಾಕ್ಟೀರಿಯಾಗಳು, ಕೀಟಗಳು, ಚಿಟ್ಟೆಗಳು, ಪಕ್ಷಿಗಳು, ಪ್ರಾಣಿಗಳು... ಹೀಗೆ ಒಂದು ದೊಡ್ಡ ಜೀವಸರಪಳಿಯೇ ಅಲ್ಲಿ ನೆಲೆಸಿರಬೇಕು. ಅಜೈವಿಕ ಅಂಶಗಳಾದ ಬೆಟ್ಟ ಗುಡ್ಡ, ನೀರಿನ ತೊರೆ ಝರಿಗಳೂ ಇರಬೇಕು. ಇಂತಹ ಪ್ರದೇಶದಲ್ಲಿ ಮಾನವನ ಹಸ್ತಕ್ಷೇಪ ಇರಬಾರದು.

ಹೀಗೆ ಜೈವಿಕ-ಅಜೈವಿಕ ಘಟಕಗಳ ಸಮೂಹ ಪ್ರದೇಶವನ್ನು ಅರಣ್ಯ ಎನ್ನಬಹುದು. ಆದರೆ ರಬ್ಬರ್ ಅಥವಾ ಕಾಫಿ ತೋಟಗಳಲ್ಲಿ ಈ ತರಹದ ಪರಿಸರ ಇರುವುದಿಲ್ಲ. ಇಲ್ಲಿ ಒಂದೇ ಜಾತಿಯ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗಿರುತ್ತದೆ. ಮಾನವನಿರ್ಮಿತ ತೋಟಗಳಿಗೂ ನಿಸರ್ಗನಿರ್ಮಿತ‌ ಅರಣ್ಯಕ್ಕೂ ಅಜಗಜಾಂತರ ಇದೆ. ಆದ್ದರಿಂದ ಕರ್ನಾಟಕದಲ್ಲಿ ಆಗಿರುವುದು ಹಸಿರಿನ‌ ಹೊದಿಕೆಯಲ್ಲಿ ಹೆಚ್ಚಳ‌.

-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು