ಮರೆತ ಅಭಿವೃದ್ಧಿಯ ಆಯಾಮ

7

ಮರೆತ ಅಭಿವೃದ್ಧಿಯ ಆಯಾಮ

Published:
Updated:

‘ಕೈಗಾ ಎಂಬ ನಿರಂತರ ಕೆಂಡ’ (ಪ್ರ.ವಾ., ಡಿ. 12) ಲೇಖನದಲ್ಲಿ ನಾಗೇಶ ಹೆಗಡೆ ಅವರು ವಿಜ್ಞಾನ ವಿಷಯಕ್ಕಿಂತ ಹೆಚ್ಚಾಗಿ ಕೈಗಾದಿಂದ ಆಗುವ ಹಾನಿಯ ಕುರಿತು ಉತ್ಪ್ರೇಕ್ಷೆ ಮಾಡಿದ್ದಾರೆ ಎನ್ನಬಹುದು.

ದೇಶದ ಅಗ್ರಗಣ್ಯ ವಿಜ್ಞಾನಿಗಳಾದ ಹೋಮಿ ಭಾಭಾ, ವಿಕ್ರಂ ಸಾರಾಭಾಯಿ, ರಾಜಾರಾಮಣ್ಣ ಅವರಂಥವರು ಮುನ್ನಡೆಸಿದ ಭಾರತೀಯ ಪರಮಾಣು ಕಾರ್ಯಕ್ರಮಗಳನ್ನು, ‘ಯಾವ ಹಿತಾಸಕ್ತಿಗಾಗಿ ನಾವು ಮುಂದುವರಿಸಬೇಕು?’ ಎಂದು ಲೇಖಕರು ಪ್ರಶ್ನಿಸಿದ್ದಾರೆ.

ಕೈಗಾ ಸುತ್ತಲಿನ ಅರಣ್ಯವು ವೃದ್ಧಿಸಿ ಜೀವವೈವಿಧ್ಯಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಯಾಗಿದೆ. ಹುಲಿ, ಚಿರತೆ, ಕಾಳಿಂಗ, ಕೆಂದಳಿಲು, ಮಂಗಟ್ಟೆ ಇತ್ಯಾದಿ ಅಳಿವಿನಂಚಿನ ಜೀವ ಪ್ರಭೇದಗಳಿಗೆ ಕೈಗಾ ಸಂರಕ್ಷಿತ ತಾಣವಾಗಿದೆ.

ದೇಶದ ಅಭಿವೃದ್ಧಿಗಾಗಿ ಕೈಗೆತ್ತಿಕೊಂಡಿರುವ ಅಣು ಶಕ್ತಿ ಕಾರ್ಯಕ್ರಮಗಳಿಂದ ನಮಗೆ ವಿದ್ಯುತ್ ಜೊತೆಗೆ ಕ್ಯಾನ್ಸರ್ ರೋಗವನ್ನು ಹೋಡೆದೋಡಿಸಲು ಬೇಕಾಗುವ ಕೊಬಾಲ್ಟ್ ಸಹ ಸಿಗುತ್ತದೆ. ಅಣುಶಕ್ತಿಯ ಉಪಯೋಗವನ್ನು ಕೃಷಿ ವಿಜ್ಞಾನದಲ್ಲೂ ಮಾಡಲಾಗುತ್ತಿದೆ. ಕೈಗಾ ತನ್ನ ಜೀವಿತಾವಧಿ ಮೀರಿದ ನಂತರದ ಯಂತ್ರೋಪಕರಣಗಳ ವಿಕಿರಣ, ಸ್ಫೋಟ, ಕೊಡಸಳ್ಳಿ ಅಣೆಕಟ್ಟು ಒಡೆಯುವ ಭಯ ಹಾಗೂ ಭೂಕುಸಿತಗಳಂತಹ ಗುಮ್ಮಗಳನ್ನು ಜನರ ಮನದಲ್ಲಿ ಸೃಷ್ಟಿಸಿರುವುದು ಬೇಸರದ ವಿಷಯ.

ಮಹಾಂತೇಶ ಗಂಗಯ್ಯ ಓಶಿಮಠ, ಕೈಗಾ

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !