ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಶಿಷ್ಟಾಚಾರ ನಿಯಮ ರೂಪಿಸಿ

Last Updated 2 ಫೆಬ್ರುವರಿ 2021, 20:48 IST
ಅಕ್ಷರ ಗಾತ್ರ

ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಆಗಿಲ್ಲ ಎಂಬ ಕಾರಣದಿಂದ ಹೊಸಕೋಟೆಯಲ್ಲಿ ಅಹಿತಕರ ವಿದ್ಯಮಾನಗಳು ನಡೆದಿವೆ. ಶಿಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಿಂದೊಮ್ಮೆ‌ ನಾನು ನಿಯಮಗಳ ಪ‍್ರತಿಯನ್ನು ಪಡೆದಿದ್ದೆ. ಅದು ಅನೇಕ ಸುತ್ತೋಲೆಗಳ ರಾಶಿ. ಈಗ ಮತ್ತೊಂದು ಸುತ್ತೋಲೆ ಹೊರಡಬಹುದು. ಯಾವುದೋ ಸಮಾರಂಭಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರನ್ನು ಕರೆದಿಲ್ಲ‌ ಎಂದು ದೂರಿದಾಗ, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸಬೇಕು ಎಂಬ ಹೊಸ ಸುತ್ತೋಲೆ ಹೊರಡಬಹುದು.

ಇಂತಹ ಶಿಷ್ಟಾಚಾರಗಳಿಂದ ಅನೇಕ ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ಕಿರಿಕಿರಿ ಉಂಟಾಗುತ್ತದೆ.‌ ಲಾಠಿಚಾರ್ಜ್, ಗೋಲಿಬಾರ್ ಹಾಗೂ ಸಾವಿಗೂ ಕಾರಣವಾಗಿದ್ದಿದೆ. ರಾಜಕಾರಣಿಗಳ ನಡುವೆ ಸಿಲುಕಿಕೊಂಡ ಅಧಿಕಾರಿಯನ್ನು ಹೊಣೆ ಮಾಡಿದ ಪ್ರಸಂಗಗಳೂ ನಡೆದಿವೆ. ಸರ್ಕಾರ ಈಗಲಾದರೂ ಈ ಹಿಂದಿನ ಎಲ್ಲ ಸುತ್ತೋಲೆಗಳು ಮತ್ತು ಇಂದಿನ ಪರಿಸ್ಥಿತಿಯನ್ನು ಗಮನಿಸಿ, ಅನುಷ್ಠಾನಯೋಗ್ಯವಾದ ಸಮಗ್ರ ಶಿಷ್ಟಾಚಾರ ನಿಯಮವನ್ನು ರೂಪಿಸಲಿ.

ಕೆ.ವೆಂಕಟರಾಜು,ಚಾಮರಾಜನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT