ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸರ್ಕಾರವೆಂಬ ದೇವರ ಹುಂಡಿ!

ಅಕ್ಷರ ಗಾತ್ರ

ದೇವಸ್ಥಾನದ ಹುಂಡಿಗಳಿಗೆ ಕಾಣಿಕೆ ಹಾಕುವಾಗ 51, 101, 501 ರೂಪಾಯಿ ಹಾಕುವುದು ರೂಢಿ. ಇತ್ತೀಚೆಗೆ ನನ್ನ ಬೈಕಿಗೆ ಪೆಟ್ರೋಲ್ ಬಂಕ್‌ನಲ್ಲಿ ಒಂದು ಲೀಟರ್ ಪೆಟ್ರೋಲ್ ಹಾಕಿಸಿದೆ. ನೂರು ರೂಪಾಯಿ ನೋಟನ್ನು ಕೊಟ್ಟೆ. ಪರಿಚಯದ ಹುಡುಗ ದರಪಟ್ಟಿ ತೋರಿಸುತ್ತಾ ‘ಇಂದಿನಿಂದ ಲೀಟರ್‌ಗೆ 101 ರೂಪಾಯಿ’ ಎಂದ. ನಾನು ಜೇಬಿನಲ್ಲಿ ತಡಕಾಡಿದಾಗ ಅಂತೂ ಒಂದು ರೂಪಾಯಿ ಸಿಕ್ಕಿತು. ಅವನಿಗೆ ಕೊಡುವಾಗ ನನ್ನ ಮನದಲ್ಲಿ, ಸರ್ಕಾರವೆಂಬ ದೇವರ ಹುಂಡಿಗೆ ಕಾಣಿಕೆ ಹಾಕಿದ ಅನುಭವ ಆದಂತಾಯಿತು!

- ನಗರ ಗುರುದೇವ್ ಭಂಡಾರ್ಕರ್,ಹೊಸನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT