ಬುಧವಾರ, ಅಕ್ಟೋಬರ್ 28, 2020
17 °C

ವಾಚಕರ ವಾಣಿ: ಗಾಂಧೀಜಿ ಪ್ರಸ್ತಾಪ ಅಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗಾಂಧಿ ಬಜಾರ್‌ನಲ್ಲಿ ಏಕಾಂಕ!’ ಎಂಬ ರವೀಂದ್ರ ಭಟ್ಟರ ಲೇಖನವು (ಪ್ರ.ವಾ., ಆ. 27) ಕಾಂಗ್ರೆಸ್ ಪಕ್ಷದ ಇಂದಿನ ದುಃಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಒಂದೇ ಕುಟುಂಬದ ಅಥವಾ ವ್ಯಕ್ತಿಯ ಅಧೀನಕ್ಕೊಳಪಟ್ಟ ಯಾವುದೇ ಪಕ್ಷ ಹೆಚ್ಚು ಕಾಲ ಬಾಳಲಾಗದು. ನಾಯಕ ಕೇಂದ್ರಿತವಾಗುತ್ತಿರುವ ಭಾರತದ ಇಂದಿನ ರಾಜಕಾರಣದ ಪರಿಸ್ಥಿತಿಯಲ್ಲಿ, ಸಮರ್ಥ ನಾಯಕನೊಬ್ಬನನ್ನು ಹುಡುಕಿಕೊಳ್ಳದಿದ್ದರೆ ಪಕ್ಷ ಇನ್ನಷ್ಟು ಅವನತಿಗೆ ಹೋಗಲಿದೆ.

ಲೇಖನದ ಮೊದಲ ಪ್ಯಾರಾದಲ್ಲಿ ಲೇಖಕರು ‘ಮಹಾತ್ಮ ಗಾಂಧಿಯಿಂದ ಹಿಡಿದು ಇಂದಿರಾ ಗಾಂಧಿ, ರಾಜೀವ್ ಗಾಂಧಿವರೆಗೆ ಎಲ್ಲರೂ ಇಂತಹ ನಾಟಕಗಳನ್ನು ಸಾಕಷ್ಟು ಆಡಿದ್ದಾರೆ. ಈಗ ರಾಹುಲ್ ಸರದಿ ಅಷ್ಟೆ’ ಎಂದಿದ್ದಾರೆ. ಇಲ್ಲಿ ಮಹಾತ್ಮ ಗಾಂಧಿ ಅವರ ಪ್ರಸ್ತಾಪ ಆಭಾಸವೆನಿಸುತ್ತದೆ. ಕಾಂಗ್ರೆಸ್ಸಿನಲ್ಲಿ ನಾಯಕತ್ವಕ್ಕಾಗಿ ಗಾಂಧೀಜಿ ಇಂತಹ ನಾಟಕವನ್ನು ಯಾವಾಗ ಆಡಿದ್ದರು ಎಂಬುದನ್ನು ಉದಾಹರಣೆಯೊಂದಿಗೆ ವಿವರಿಸಿದ್ದರೆ ಓದುಗರಲ್ಲಿ ಸ್ಪಷ್ಟತೆ ಮೂಡುತ್ತಿತ್ತು. 

-ಪ್ರತಿಭಾ ಪಿ. ದೊಗ್ಗಳ್ಳಿ, ದಾವಣಗೆರೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು