ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಘ್ನ ನಿವಾರಕನ ಪೂಜೆ ವಿಘ್ನಕಾರಕವಾದರೆ...

Last Updated 30 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಗಣೇಶ ಹಬ್ಬಕ್ಕಾಗಿ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶನ ಮೂರ್ತಿಗಳು ಕದ್ದುಮುಚ್ಚಿ ಮಾರಾಟವಾಗುತ್ತಿವೆ. ಇವುಗಳ ಮಾರಾಟಗಾರರ ಮೇಲೆ ಅಧಿಕಾರಿಗಳು ಕ್ರಮ‌ ತೆಗೆದುಕೊಳ್ಳಬೇಕು. ಪಿಒಪಿ‌ ಗಣೇಶನ ಮೂರ್ತಿಗಳಿಂದ ಜನರಿಗೆ, ಜಲಚರಗಳಿಗೆ, ಪರಿಸರಕ್ಕೆ ಹಾನಿ ಉಂಟಾಗುತ್ತದೆ ಎನ್ನುವುದನ್ನು ನಾವೆಲ್ಲ ಅರಿಯಬೇಕಿದೆ.

ವಿಘ್ನ ನಿವಾರಿಸಲೆಂದು ಪೂಜಿಸುವ ಹಬ್ಬದಿಂದ ವಿಘ್ನಗಳುಂಟಾಗದಂತೆ ಎಚ್ಚರ ವಹಿಸುವುದು ನಮ್ಮೆಲ್ಲರ ಹೊಣೆ. ಪರಿಸರಸ್ನೇಹಿ ಮೂರ್ತಿಯನ್ನು ಪೂಜಿಸುವ ಮೂಲಕ ಹಬ್ಬ ಆಚರಿಸಬೇಕು. ನೈಸರ್ಗಿಕ ಅಲಂಕಾರ ಶ್ರೇಷ್ಠವಾದ್ದರಿಂದ ಪರಿಸರಸ್ನೇಹಿ ವಸ್ತುಗಳನ್ನೇ ಗಣೇಶನ ಅಲಂಕಾರಕ್ಕೆ ಬಳಸಬೇಕು. ಮೂರ್ತಿ ವಿಸರ್ಜಿಸುವ ಮುನ್ನ ವಿಗ್ರಹದ‌ ಮೇಲಿನ ಹೂ, ವಸ್ತ್ರ, ಹಾರಗಳನ್ನು ತೆಗೆದು ವಿಸರ್ಜಿಸಬೇಕು. ಮಾಲಿನ್ಯಕ್ಕೆ ಆಸ್ಪದವಾಗದಂತೆ ನೋಡಿಕೊಳ್ಳಬೇಕು.

– ಉಮ್ಮೆ ಅಸ್ಮ ಕೆ.ಎಸ್.,ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT