ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಮನೆಯಲ್ಲೇ ನೆನೆಯೋಣ ವಿಘ್ನ ನಿವಾರಕನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್ ಆತಂಕ ಪೂರ್ಣ ಮರೆಯಾಗಿದೆಯೇ? ಇಲ್ಲ, ಮೂರನೇ ಅಲೆಯ ಗುಮ್ಮ ಕಣ್ಮುಂದಿದೆ. ಪರಿಸ್ಥಿತಿ ಹೀಗಿರುವಾಗಲೂ ಹಬ್ಬಗಳ ಆಚರಣೆ ವಿಚಾರ ಹೆಚ್ಚಿನ ಚರ್ಚೆಗೊಳಗಾಗುತ್ತಿದೆ. ಅದರಲ್ಲೂ ಸಾರ್ವಜನಿಕ ಗಣೇಶೋತ್ಸವ ಮುನ್ನೆಲೆಗೆ ಬಂದಿದೆ. ಭಕ್ತಿಗಿಂತ ಆಡಂಬರಕ್ಕೆ ಹೆಚ್ಚು ಒತ್ತು ಇರುವುದನ್ನು ಬಹುಶಃ ಯಾರೂ ಅಲ್ಲಗಳೆಯಲಿಕ್ಕಿಲ್ಲ. ಗಣೇಶೋತ್ಸವದ ನೆಪದಲ್ಲಿ ಕೆಲವರು ಬಲವಂತವಾಗಿ, ಬೆದರಿಸಿ ಚಂದಾ ಎತ್ತುವುದಂಟು. ಶಬ್ದ ಮಾಲಿನ್ಯದಿಂದ ಜನರ ನೆಮ್ಮದಿ ಹಾಳು ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇಂಥ ಭಕ್ತಿಯನ್ನು ವಿನಾಯಕ ಬಯಸುತ್ತಾನೆಯೇ?

ಅಷ್ಟಕ್ಕೂ ಕೋವಿಡ್ ಕರಿನೆರಳಿನಲ್ಲಿ ಈ ಬಗೆಯ ಆಚರಣೆ ತೀರಾ ಅಗತ್ಯವೇ? ಕೋವಿಡ್‌ ಆತಂಕದ ಈ ಸಮಯದಲ್ಲಿ, ಮನೆಯಲ್ಲಿಯೇ ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಿ ನಿಜವಾದ ಭಕ್ತಿಯೊಂದಿಗೆ ವಿಘ್ನ ನಿವಾರಕನನ್ನು ನೆನೆದರೆ ಸಾಕಲ್ಲವೇ?

-ನಾರಾಯಣರಾವ್ ಕುಲಕರ್ಣಿ, ಹಿರೇಅರಳಿಹಳ್ಳಿ, ಯಲಬುರ್ಗಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು