7

ಹಿಂದಿ ಕೋರ್ಸ್‌ಗಳಿಗೆ ಪದವಿಯ ಮಾನ್ಯತೆ ನೀಡಿ

Published:
Updated:

ಹಿಂದಿ ಭಾಷೆಯ ಕಲಿಕೆಗೆ ಸಂಬಂಧಿಸಿದಂತೆ ನಮ್ಮ ಶಿಕ್ಷಣ ಇಲಾಖೆಯೇ ಪರೀಕ್ಷೆಗಳನ್ನು ನಡೆಸಿ, ಹಿಂದಿ ಭಾಷಾ ಪ್ರವೀಣ, ಭಾಷಾ ರತ್ನ, ಭಾಷಾ ವಿದ್ವಾನ್, ಹಿಂದಿ ಭಾಷಾ ವಿಶಾರದ ಮುಂತಾದ ಪ್ರಮಾಣಪತ್ರಗಳನ್ನು ನೀಡುತ್ತದೆ. ಈ ಕೋರ್ಸ್‌ಗಳು ಪದವಿಗೆ ಸಮನಾದವು ಎಂದು ಪರಿಗಣಿಸಿ, ಅವುಗಳ ಆಧಾರದ ಮೇಲೆ ‘ಹಿಂದಿ ಶಿಕ್ಷಕ’ ಎಂಬ ಬಿಇಡಿಗೆ ಸಮಾನವಾದ 9 ತಿಂಗಳ ತರಬೇತಿಯನ್ನು ನೀಡಿ ಪ್ರಮಾಣಪತ್ರವನ್ನು ಸಹ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೀಡಿರುತ್ತದೆ.

ಈ ತರಬೇತಿಯನ್ನು ಮಾನ್ಯ ಮಾಡಿ, ಸಾಮಾನ್ಯ ಪ್ರವೇಶ ಪರೀಕ್ಷೆಗಳ ಮೂಲಕ ಸರ್ಕಾರವು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಶಿಕ್ಷಕರ ನೇಮಕ ಮಾಡುತ್ತಿತ್ತು. 2016ರ ಸೆಪ್ಟೆಂಬರ್‌ನಲ್ಲಿ ವೃಂದ ಮತ್ತು ನೇಮಕಾತಿಗೆ ಸಂಬಂಧಿಸಿ ಹೊಸ ನಿಯಮಾವಳಿ ರೂಪಿಸಿದಾಗ ಮೇಲ್ಕಾ
ಣಿಸಿದ ಕೋರ್ಸ್‌ಗಳ ‘ಪದವಿ ಮಾನ್ಯತೆ’ಯನ್ನು ಅಮಾನ್ಯ ಮಾಡಲಾಗಿದೆ. ಇದರಿಂದ ಲಕ್ಷಾಂತರ ನಿರುದ್ಯೋಗಿ ಯುವಕ- ಯುವತಿಯರ ಬಾಳಿನಲ್ಲಿ ಕತ್ತಲು ಆವರಿಸಿದಂತಾಗಿದೆ.

ಯಾವುದೇ ಕಾಯ್ದೆಯು ಅದು ಅಂಗೀಕಾರವಾದ ದಿನದಿಂದ ಜಾರಿಗೆ ಬರುವುದು ಸಾಮಾನ್ಯ. ಆದರೆ ಈ ವಿಚಾರದಲ್ಲಿ ಹೊಸ ಕಾಯ್ದೆಯನ್ನು ಪೂರ್ವಾನ್ವಯವಾಗುವಂತೆ ಜಾರಿ ಮಾಡಿದ್ದರಿಂದ ಈ ಕೋರ್ಸ್‌ಗಳನ್ನು ಪೂರೈಸಿ, ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಅನ್ಯಾಯವಾಗಿದೆ. ಶಿಕ್ಷಣ ಸಚಿವರು ಈ ಎಲ್ಲ ಕೋರ್ಸ್‌ಗಳನ್ನು ಪದವಿಗೆ ಸಮಾನವೆಂದು ಪರಿಗಣಿಸಿ ಮುಂದಿನ ನೇಮಕಾತಿಯಲ್ಲಿ ನಮ್ಮ ಅರ್ಜಿಗಳನ್ನೂ ಪರಿಗಣಿಸಬೇಕು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !