ಸೋಮವಾರ, ಆಗಸ್ಟ್ 15, 2022
22 °C

ಬೊಂಬೆಗಳ ನಾಡಿಗೆ ಮಾನ್ಯತೆ ಸಿಗಲಿ

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣವು ‘ಬೊಂಬೆಗಳ ನಾಡು’ ಎಂದು ಪ್ರಸಿದ್ಧವಾಗಿದೆ. ಆತ್ಮನಿರ್ಭರ ಭಾರತ ಯೋಜನೆಯಡಿ ದೇಶಿ ಬೊಂಬೆ ತಯಾರಿಕೆಗೆ ಉತ್ತೇಜನ ನೀಡಲು ‘ಮನ್ ಕಿ ಬಾತ್’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಚನ್ನಪಟ್ಟಣದ ಬೊಂಬೆ ತಯಾರಿಕೆಯನ್ನು ಪ್ರಸ್ತಾಪಿಸಿದ್ದರು. ಅದರಂತೆ ರಾಜ್ಯ ಸರ್ಕಾರವು ಕೊಪ್ಪಳದಲ್ಲಿ ‘ಆಟಿಕೆಗಳ ಕ್ಲಸ್ಟರ್’ ಸ್ಥಾಪಿಸಲು ಮುಂದಾಗಿದೆ. ಚನ್ನಪಟ್ಟಣದ ಬೊಂಬೆಗಳಿಗೆ ಭೌಗೋಳಿಕ ಮಾನ್ಯತೆ ದೊರೆತಿದೆ. ಬೊಂಬೆ ತಯಾರಿಕೆಯಲ್ಲಿ ಇಲ್ಲಿನ ಕುಶಲಕರ್ಮಿಗಳು ಪರಿಣತಿ ಹೊಂದಿದ್ದಾರೆ. ಬೊಂಬೆ ತಯಾರಿಕೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಐತಿಹಾಸಿಕ ಸ್ಥಳ ಸಹ ಇದಾಗಿದೆ. ಹೀಗಾಗಿ, ಇದನ್ನು ಬಿಟ್ಟು ಕೊಪ್ಪಳದಲ್ಲಿ ಆಟಿಕೆಗಳ ಕ್ಲಸ್ಟರ್‌ ಸ್ಥಾಪಿಸುವುದು ಯುಕ್ತವೇ?

ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು, ಚನ್ನಪಟ್ಟಣ
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.