ಗುರುವಾರ , ನವೆಂಬರ್ 21, 2019
20 °C

ಅಂಗನವಾಡಿಗೆ ಮಗಳನ್ನು ಸೇರಿಸಿದ ಕೊಡಗು ಎಸ್‌ಪಿ: ಅಭಿನಂದನೀಯ ನಡವಳಿಕೆ

Published:
Updated:

ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ತಮ್ಮ ಎರಡೂವರೆ ವರ್ಷದ ಪುತ್ರಿ ಖುಷಿಯನ್ನು ಅಂಗನವಾಡಿಗೆ ಸೇರಿಸಿ ಅಲ್ಲಿನ ಇತರ ಮಕ್ಕಳ ಜೊತೆ ಬೆರೆತು ಕಲಿಯುವಂತೆ ಮಾಡಿದ್ದಾರೆ (ಪ್ರ.ವಾ., ಅ. 16). ಈ ಮೂಲಕ, ಸರ್ಕಾರಿ ಶಾಲೆಗಳ ಪರ ಬರೀ ಭಾಷಣ ಮಾಡದೆ ಸ್ವತಃ ಅನುಸರಿಸಿದ್ದಾರೆ.

ಇದನ್ನೂ ಓದಿ: ಕೊಡಗು ಎಸ್‌ಪಿ ಪುತ್ರಿ ಅಂಗನವಾಡಿಯಲ್ಲಿ ಕಲಿಕೆ

ಇವರ ನಡವಳಿಕೆ ಮಾದರಿಯದಾಗಿದ್ದು ಎಲ್ಲ ಸರ್ಕಾರಿ ಅಧಿಕಾರಿಗಳೂ ಕಡ್ಡಾಯವಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿದರೆ, ಅವುಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗುವುದರಲ್ಲಿ ಸಂಶಯವಿಲ್ಲ.

-ಡಿ.ಪ್ರಸನ್ನ ಕುಮಾರ್, ಬೆಂಗಳೂರು

ಪ್ರತಿಕ್ರಿಯಿಸಿ (+)