ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ವಾಹನ: ವಾಮಮಾರ್ಗದ ಬಳಕೆ ಬೇಡ

Last Updated 12 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಸರ್ಕಾರಿ ವಾಹನಗಳ ದುರುಪಯೋಗಕ್ಕೆ ಕಡಿವಾಣ ಹಾಕಬೇಕು ಎಂದು ಕೆಎಸ್‌ಟಿಡಿಸಿ ಎಂಪ್ಲಾಯೀಸ್ ಯೂನಿಯನ್ ಆಗ್ರಹಿಸಿರುವುದು (ಪ್ರ.ವಾ., ಸೆ. 12) ಸ್ವಾಗತಾರ್ಹ. ವಾರಾಂತ್ಯಗಳಲ್ಲಿ ನಾವು ಪುಣ್ಯಕ್ಷೇತ್ರಗಳಿಗೆ ಹೋದಾಗ ಅಲ್ಲಿ ಸರ್ಕಾರಿ ವಾಹನಗಳನ್ನು ಕಾಣುತ್ತೇವೆ. ಶನಿವಾರ ಹಾಗೂ ಭಾನುವಾರ ರಜಾದಿನಗಳಾಗಿದ್ದರೂ ಅಧಿಕಾರಿಗಳು ಸರ್ಕಾರಿ ವಾಹನಗಳನ್ನು ಉಪಯೋಗಿಸುತ್ತಾರೆ ಎಂದರೆ ಏನೆನ್ನಬೇಕು? ಇದರಿಂದ ಸರ್ಕಾರದ ಹಣ ಪೋಲಾಗುವುದು ಅರ್ಥವಾಗುತ್ತದೆ.

ಅಲ್ಲದೆ ಸರ್ಕಾರಿ ಅಧಿಕಾರಿಗಳಿಗೆ ಪ್ರವಾಸ ಭತ್ಯೆಯಂತಹ ಸೌಲಭ್ಯಗಳನ್ನು ಕೊಟ್ಟಿದ್ದರೂ ಅವರು ಈ ರೀತಿ ವಾಮಮಾರ್ಗದಲ್ಲಿ ಸರ್ಕಾರದ ಅರ್ಥಾತ್‌ ಸಾರ್ವಜನಿಕರ ಹಣವನ್ನು ಪೋಲು ಮಾಡುವುದು ಸರಿಯೇ?

- ಬಾಲಕೃಷ್ಣ ಎಂ.ಆರ್.,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT