ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಜೀವಗಳಿಗೆ ತ್ರಾಸ ತಂದ ಮತದಾನ

Last Updated 31 ಡಿಸೆಂಬರ್ 2020, 19:32 IST
ಅಕ್ಷರ ಗಾತ್ರ

ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತ ಚಲಾಯಿಸಲು ಬಂದಿದ್ದ, ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವೃದ್ಧರನ್ನು ಕಂಡು ಮರುಕವಾಯಿತು. ವರ್ಷಗಳಿಂದ ತಮ್ಮ ಕೋಣೆಯನ್ನು ಬಿಟ್ಟು ಹೊರಪ್ರಪಂಚ ನೋಡಿರದ ಈ ಹಿರಿಜೀವಗಳಿಗೆ ಮತ ಚಲಾವಣೆ ಎಂಬುದು ತ್ರಾಸ ತಂದಿತು. ಹೀಗೆ ವೃದ್ಧರಿಗೆ ಆಸರೆಯಾಗಿ ಅವರನ್ನು ಮತಗಟ್ಟೆಗೆ ಕರೆತಂದವರು, ಮತ ಚಲಾವಣೆ ನಂತರ ಸುರಕ್ಷಿತವಾಗಿ ಅವರವರ ಮನೆಗೆ ತಲುಪಿಸುವರೇ?

ಇನ್ನು ಮತ ಚಲಾವಣೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಕ್ಕು ಮತ್ತು ಕರ್ತವ್ಯವೆಂದು ವ್ಯವಸ್ಥೆ ವಾದಿಸಬಹುದು. ಆದರೆ ಸಮಾನ ಆರೋಗ್ಯ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿವೆಯೇ ಎಂಬ ಬಗ್ಗೆ ಆತ್ಮಾವಲೋಕನವೂ ನಡೆಯಬೇಕಾಗಿದೆ. ಅಶಕ್ತರು, ಹಿರಿಯ ಜೀವಗಳನ್ನು ಬಲವಂತವಾಗಿ ಮತಗಟ್ಟೆಗೆ ಕರೆತರುವುದರ ಬದಲು, ಅವರು ಇರುವಲ್ಲಿಗೇ ಹೆಚ್ಚುವರಿ ಚುನಾವಣಾ ಅಧಿಕಾರಿಗಳು ಹೋಗಿ, ಅವರಿಂದ ಮತದಾನ ಮಾಡಿಸಿಕೊಂಡು ಬರುವಂತಹ ವ್ಯವಸ್ಥೆ ಆಗಬೇಕು.

–ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT