ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಸರಿಗೆ ತೆರಿಗೆ: ಮತ್ತಷ್ಟು ಹೊರೆ

Last Updated 1 ಜುಲೈ 2022, 20:30 IST
ಅಕ್ಷರ ಗಾತ್ರ

ಇತ್ತೀಚೆಗೆ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ, ಮೊಸರು ಮತ್ತು ಮಜ್ಜಿಗೆಯ ಮೇಲೆ ತೆರಿಗೆ ವಿಧಿಸಲು ಶಿಫಾರಸು ಮಾಡಲಾಗಿದೆ (ಪ್ರ.ವಾ., ಜೂನ್‌ 29). ಈ ಸುದ್ದಿಯನ್ನು ಓದಿ ತುಸು ಬೇಸರವಾಯಿತು. ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಎಲ್ಲ ವರ್ಗಗಳ ಜನ ಪ್ರತಿದಿನವೂ ಬಳಕೆ ಮಾಡುತ್ತಾರೆ. ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆಗೆ ಈವರೆಗೆ ತೆರಿಗೆಯಿಂದ ವಿನಾಯಿತಿ ಇತ್ತು. ಆದರೆ, ಇನ್ನು ಮುಂದೆ ಶೇಕಡ 5ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಹಣದುಬ್ಬರ ವಿಪರೀತವಾಗಿರುವ ಇಂದಿನ ಸಂದರ್ಭದಲ್ಲಿ ಈ ತೆರಿಗೆಯಿಂದಾಗಿ ಜನಸಾಮಾನ್ಯರಿಗೆ ಯಾವ ಬಗೆಯಿಂದ ಪ್ರಯೋಜನ ಆದೀತು? ಇದು ಹಣದುಬ್ಬರ ಇನ್ನಷ್ಟು ಹೆಚ್ಚಾಗಲು ಕಾರಣವಾಗಬಹುದು.

-ಎಂ.ಎಸ್. ಜ್ಯೋತಿ,ಸಾಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT