ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‍ಪಾಲನೆಯಾಗದ ಮಾರ್ಗಸೂಚಿ

Last Updated 30 ಸೆಪ್ಟೆಂಬರ್ 2020, 20:30 IST
ಅಕ್ಷರ ಗಾತ್ರ

ಕೆ–ಸೆಟ್‌ ಪರೀಕ್ಷೆ ಶಿಸ್ತಿಲ್ಲದೇ ನಡೆಯಿತು ಎಂದು ಅಶ್ವಿನಿ ಎನ್‌. ಹರಿ ಅವರು ಬರೆದಿರುವುದು (ವಾ.ವಾ., ಸೆ. 30) ಸರಿಯಾಗಿದೆ. ಇದೇ 27ರಂದು ನಡೆದ ಪರೀಕ್ಷೆಯನ್ನು ನಾನು ಸಹ ಬರೆದೆ. ಕೊರೊನಾ ಹಾವಳಿಯ ಈ ಸಂದರ್ಭದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದುದು ಕಂಡುಬಂತು. ಪರೀಕ್ಷಾ ಕೇಂದ್ರಗಳಲ್ಲಿ ಸೂಕ್ತ ಸೌಲಭ್ಯಗಳು ಹಾಗೂ ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದುದು ಅತ್ಯಂತ ವಿಷಾದಕರ.

ಇನ್ನು ಮುಂದೆ ನಡೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಅತ್ಯಂತ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡು ಪರೀಕ್ಷೆ ನಡೆಸುವಂತೆ ಆಗಬೇಕು.

ಪರಶುರಾಮ್ ಎ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT