ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬೇಕಾಗಿದೆ ವಿಭಿನ್ನ ದೃಷ್ಟಿಕೋನದ ನಾಯಕತ್ವ

Last Updated 27 ಅಕ್ಟೋಬರ್ 2021, 17:37 IST
ಅಕ್ಷರ ಗಾತ್ರ

ಹಾನಗಲ್‌ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರದ ಹಿನ್ನೆಲೆಯಲ್ಲಿ ಖಚಿತವಾಗುತ್ತಿರುವ ಅಂಶವೆಂದರೆ, ರಾಜ್ಯದ ಅಭಿವೃದ್ಧಿಗಾಗಿ ನಿಖರ ಮುನ್ನೋಟ ಇಲ್ಲದಿರುವುದನ್ನು ಮುಖ್ಯಮಂತ್ರಿಯಾದಿಯಾಗಿ ಇತರ ಎಲ್ಲಾ ಪಕ್ಷದ ನಾಯಕರು ಸ್ಪಷ್ಟಪಡಿಸಿದ್ದಾರೆ. ವೋಟು ಪಡೆಯಲು ಒಣ ಸಿದ್ಧಾಂತದ ಬುರುಡೆ ಬಿಟ್ಟಿದ್ದಾರೆ. ಪರಸ್ಪರ ಕಾಲೆಳೆದುಕೊಂಡಿದ್ದಾರೆ. ಜಾತಿ ಸಮೀಕರಣದ ಲೆಕ್ಕ ಹಾಕಿ ವೋಟಿಗಾಗಿ ಆಯಾ ಜಾತಿಗಳ ಮೂಗಿಗೆ ತುಪ್ಪ ಸವರಿದ್ದಾರೆ ಮತ್ತು ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದಾರೆ.

ಸದ್ಯದ ಸ್ಥಿತಿ ಅವಲೋಕಿಸಿದರೆ ಕರ್ನಾಟಕದ ಭವಿಷ್ಯ ಚೇತೋಹಾರಿಯೇನಲ್ಲ. ರಾಷ್ಟ್ರೀಯ ಪಕ್ಷಗಳ ಮರ್ಜಿಯಲ್ಲಿ ಮುಂದುವರಿಯುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ದೇಶದ ನಂಬರ್ ಒನ್ ರಾಜ್ಯವಾಗುವ ಎಲ್ಲಾ ಅವಕಾಶ ಗಳಿಂದ ವಂಚಿತವಾಗುತ್ತಿರುವ ಕರ್ನಾಟಕಕ್ಕೆ ನಿಜಕ್ಕೂ ವಿಭಿನ್ನ ದೃಷ್ಟಿಕೋನವುಳ್ಳ ಹೊಸ ನಾಯಕತ್ವ, ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ.

-ರಿಪ್ಪನ್‌ಪೇಟೆ ನಟರಾಜ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT