ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷರಹಿತ ಮಾತು: ಮಾದರಿ ನಡೆ

Last Updated 18 ಫೆಬ್ರುವರಿ 2021, 22:20 IST
ಅಕ್ಷರ ಗಾತ್ರ

ತಮ್ಮ ತಂದೆ ರಾಜೀವ್ ಗಾಂಧಿ ಅವರ ಹಂತಕರನ್ನು ಕ್ಷಮಿಸಿರುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ (ಪ್ರ.ವಾ., ಫೆ. 18). ಸಿನಿಮಾ ಅಥವಾ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಹೀರೊ ಈ ರೀತಿ ಇರುವುದಿಲ್ಲ. ಆತ ಹಂತಕರನ್ನು ಕೊಲ್ಲುವ ತನಕ ನಿದ್ರಿಸನು. ಸಾಮಾನ್ಯ ಜನ ಸಹ ಕೋರ್ಟ್‌ ಮೆಟ್ಟಿಲನ್ನಾದರೂ ಹತ್ತಿ ಹಂತಕನ ವಿರುದ್ಧ ಹೋರಾಡುತ್ತಾರೆ.

ಒಟ್ಟು ಅವನ ಅವನತಿಯನ್ನೇ ಬಯಸುತ್ತಾರೆ. ಆದರೆ, ದೇಶದ ದೊಡ್ಡ ರಾಜಕೀಯ ನಾಯಕನಾಗಿಯೂ ಸೌಹಾರ್ದಯುತವಾದ ಮಾತುಗಳ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ರಾಹುಲ್‌ ಅವರಿಗೆ ದೊಡ್ಡ ನಮನ. ಸಾಮಾನ್ಯವಾಗಿ ರಾಜಕೀಯ ನಾಯಕರು ತಮ್ಮ ಮಕ್ಕಳು ದಾರಿ ತಪ್ಪಿದ್ದರೂ ಅವರ ರಕ್ಷಣೆಗೆ ಮುಂದಾಗುತ್ತಾರೆ. ಜನಸಾಮಾನ್ಯರಿಗೆ ಮೋಸ ಮಾಡಿಯಾದರೂ ಸರಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಮುಂದಾಗುತ್ತಾರೆ. ಇಂತಹವರ ನಡುವೆ ರಾಹುಲ್‌ ಅವರ ನಡೆ ಮಾದರಿಯಾಗಿದೆ.

-ಬಾಲಕೃಷ್ಣ ಎಂ.ಆರ್., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT