ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಪಲ್ಲಟ ಹೊಂದುವರೇ?

Last Updated 23 ನವೆಂಬರ್ 2018, 17:49 IST
ಅಕ್ಷರ ಗಾತ್ರ

ಕುರುಬ ಸಮುದಾಯದವರು ಈಗ ನಿಸ್ಸಂದೇಹವಾಗಿ ಭಕ್ತ ಕನಕದಾಸರನ್ನು ತಮ್ಮ ‘ಕುಲಗುರು’ವನ್ನಾಗಿ ಒಪ್ಪಿಕೊಂಡಿದ್ದಾರೆನಿಸುತ್ತದೆ. ಕನಕದಾಸ ಜಯಂತಿ ಜಾರಿಗೆ ಬಂದ ಮೇಲಂತೂ ಕನಕದಾಸರಿಗೆ ಎಲ್ಲಿಲ್ಲದ ಮನ್ನಣೆ ದೊರೆಯತೊಡಗಿದೆ. ಕನಕದಾಸರ ಮೂರ್ತಿಗಳು ಎಲ್ಲೆಲ್ಲೂ ವಿಜೃಂಭಿಸುತ್ತಿವೆ!

ಕುರುಬರು ತಮ್ಮ ಡೊಳ್ಳಿನ ಪದಗಳನ್ನು ‘ಗುರುವ ರೇವಣಸಿದ್ಧರಿಗೆ...’ ಎಂದೇ ಆರಂಭಿಸುತ್ತಾರೆ! ಅಂದರೆ 12ನೇ ಶತಮಾನದ ಮಹಾಶರಣ ರೇವಣಸಿದ್ಧರು ಇವರ ‘ಗುರು’ ಎಂದಂತಾಯಿತು! ಕುರುಬರ ಮನೆಗಳಲ್ಲಿ ಗಂಡು ಮಕ್ಕಳಿಗೆ ‘ರೇವಣಸಿದ್ಧ’ ಎಂದು ಹೆಸರಿಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕುರುಬರು ಹಣೆಗೆ ವಿಭೂತಿ ಹಚ್ಚಿಕೊಳ್ಳುತ್ತಾರೆ.

ಇಷ್ಟಲಿಂಗ ಧರಿಸಿ ಪೂಜಿಸುತ್ತಾರೆ. ‘ಶಿವ’ ಇವರ ಅಧಿದೈವ. ಇವರ ಸಂಸ್ಕೃತಿ ಲಿಂಗಾಯತರ ಸಂಸ್ಕೃತಿ ರೀತಿಯಲ್ಲಿ ಇರುತ್ತದೆ. ಈಗ ಕನಕದಾಸರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಒಪ್ಪಿಕೊಂಡ ಕುರುಬರು ಹಣೆಗೆ ‘ನಾಮ’ ಹಚ್ಚಿಕೊಂಡು ‘ಜನಿವಾರ’ ಧರಿಸಿ ‘ವಿಷ್ಣು’ವನ್ನು ಆರಾಧ್ಯ ದೈವವನ್ನಾಗಿ ಸ್ವೀಕರಿಸುತ್ತಾರೆಯೇ? ಆ ಮೂಲಕ ಶೈವ ಸಂಸ್ಕೃತಿಗೆ ತಿಲಾಂಜಲಿ ನೀಡಿ, ಸಾಂಸ್ಕೃತಿಕ ಪಲ್ಲಟಕ್ಕೆ ಒಳಗಾಗುತ್ತಾರೆಯೇ? ರೇವಣಸಿದ್ಧರನ್ನು ಹಿನ್ನೆಲೆಗೆ ಸರಿಸುತ್ತಾರೆಯೇ? ಅಥವಾ ಇಬ್ಬರನ್ನೂ ಒಟ್ಟಿಗೆ ಸ್ವೀಕರಿಸುತ್ತಾರೆಯೇ? ಕಾಲಾಯ ತಸ್ಮೈ ನಮಃ

ಶಿವಕುಮಾರ ಬಂಡೋಳಿ, ಹುಣಸಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT