ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಆರ್‌ಎಸ್‌ಎಸ್‌ ಸಂಸ್ಥೆ ಕಳಂಕಿತವಲ್ಲ

Last Updated 26 ಅಕ್ಟೋಬರ್ 2021, 19:45 IST
ಅಕ್ಷರ ಗಾತ್ರ

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂಬಾನಿ ಮತ್ತು ಆರ್‌ಎಸ್‍ಎಸ್ ಜೊತೆ ಸಂಪರ್ಕ ಹೊಂದಿರುವ ವ್ಯಕ್ತಿಗಳಿಗೆ ಸೇರಿದ ಕಡತಗಳನ್ನು ವಿಲೇವಾರಿ ಮಾಡಲು ತಮಗೆ ₹ 300 ಕೋಟಿಯ ಆಮಿಷ ಒಡ್ಡಲಾಗಿತ್ತು ಎಂಬ ಜಮ್ಮು ಮತ್ತು ಕಾಶ್ಮೀರದ ಮಾಜಿ ಗವರ್ನರ್‌ ಹೇಳಿಕೆಯನ್ನು ಜೆಡಿಎಸ್‌ ಮುಖಂಡ ಎಚ್.ಡಿ.ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರವು ಕೇಂದ್ರಾಡಳಿತಕ್ಕೆ ಒಳಪಟ್ಟ ಮೇಲೆ ಈ ಪ್ರಕರಣ ನಡೆದಿದ್ದಲ್ಲಿ,ಲೆಫ್ಟಿನೆಂಟ್ ಗವರ್ನರ್ ಆಗಿದ್ದವರು ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಯಾವ ಅಡಚಣೆಯೂ ಇರಲಿಲ್ಲ.ರಾಜ್ಯಪಾಲರಾಗಿದ್ದವರೇ ಆರೋಪಿಸಲಿ ಅಥವಾ ಒಬ್ಬ ಸಾಮಾನ್ಯ ಪ್ರಜೆಯೇ ಆರೋಪಿಸಲಿ, ಅಂತಹ ಆರೋಪಕ್ಕೆ ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಅದರಲ್ಲಿ ಯಾವ ಹುರುಳೂ ಇರುವುದಿಲ್ಲ.

ಒಂದು ವೇಳೆ ಈ ವಿಚಾರ ಸತ್ಯವೇ ಆಗಿದ್ದಲ್ಲಿ, ಲಂಚ ಕೊಡಲು ಬಂದವರು ಕಳಂಕಿತರಾಗುವರೇ ಹೊರತುಇಡೀ ಆರ್‌ಎಸ್‍ಎಸ್ ಸಂಘಟನೆಯೇ ಕಳಂಕಿತವಾಗಲು ಸಾಧ್ಯವಿಲ್ಲ. ದೇಶದಲ್ಲಿ ಪ್ರವಾಹ ಮತ್ತು ಕ್ಷಾಮಗಳು ಉಂಟಾದಾಗ ಜಾತಿ ಅಥವಾ ಕೋಮನ್ನು ನೋಡದೆ ಆರ್‌ಎಸ್‍ಎಸ್ ಸಹಾಯಕ್ಕೆ ಬಂದಿರುವುದಕ್ಕೆ ಹಲವಾರುನಿದರ್ಶನಗಳಿವೆ. ಆಧಾರರಹಿತವಾದ ಆಪಾದನೆಯನ್ನು ಯಾರ ಬಗ್ಗೆಯಾಗಲಿ ಮಾಡುವುದೂ ಒಂದೇ ಗಾಳಿಯಲ್ಲಿ ಗುದ್ದಿ ಮೈ ನೋಯಿಸಿಕೊಳ್ಳುವುದೂ ಒಂದೇ. ತಪ್ಪಿತಸ್ಥರನ್ನು ಈಗಲೂ ಕಾನೂನಿನ ಕತ್ತರಿಗೆ ಒಳಪಡಿಸಲು ಯಾವ ಕಷ್ಟವೂ ಇಲ್ಲ.

-ಕೆ.ವಿ.ಸೀತಾರಾಮಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT