ಭಾನುವಾರ, ಆಗಸ್ಟ್ 14, 2022
20 °C

ಹೃದ್ರೋಗಿಗಳ ಬವಣೆ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯು ಕರ್ನಾಟಕದ ಹೆಮ್ಮೆ. ಪ್ರತಿದಿನ ಸಾವಿರಾರು ಹೊರರೋಗಿ
ಗಳನ್ನು ಪರೀಕ್ಷಿಸುವ ಈ ಸಂಸ್ಥೆ ವಾರ್ಷಿಕವಾಗಿ 3000ಕ್ಕೂ ಹೆಚ್ಚು ಹೃದಯ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತದೆ. ಪ್ರತಿದಿನ ಈ ಆಸ್ಪತ್ರೆಗೆ ದೂರದ ಊರುಗಳಿಂದ ನೂರಾರು ಜನ ಹೃದಯ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಬರುತ್ತಾರೆ. ಹೊರರೋಗಿ ವಿಭಾಗದಲ್ಲಿ ರೋಗ ಪರೀಕ್ಷೆಗಾಗಿ ನೊಂದಣಿ ಮಾಡಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಲ್ಲಬೇಕಿದೆ. ಬೆಳಗಿನ ಜಾವ 3 ಗಂಟೆಗೇ ಈ ಸರತಿ ಸಾಲು ಪ್ರಾರಂಭವಾಗುತ್ತದೆ. ಆದರೆ ಹೊರರೋಗಿ ನೋಂದಣಿ ವಿಭಾಗ ತೆರೆಯುವುದು ಬೆಳಿಗ್ಗೆ 9 ಗಂಟೆಗೆ. ಅಲ್ಲಿಯವರೆಗೂ ರೋಗಿಗಳು ಮತ್ತು ಅವರ ಕಡೆಯವರು ಈ ಸಾಲಿನಲ್ಲಿ ನಿಲ್ಲಬೇಕಿರುವುದರಿಂದ ಬಹಳಷ್ಟು ಜನರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ. ಸರತಿ ಸಾಲಿನಲ್ಲಿ ನಿಂತವರು ಮೂತ್ರ ವಿಸರ್ಜನೆ ಮಾಡಲು ಕೂಡಾ ಹೋಗಲಾರದ ಪರಿಸ್ಥಿತಿ ಇದೆ. ಈ ತೊಂದರೆ ತಪ್ಪಿಸಬೇಕೆಂದರೆ ದೂರದ ಊರಿನಿಂದ ಬರುವವರಿಗೆ ಟೋಕನ್ ಕೊಡುವ ವ್ಯವಸ್ಥೆ ಮಾಡಬೇಕು. ಸಂಸ್ಥೆಯ ನಿರ್ದೇಶಕರು ಈ ದಿಸೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ.

-ವಿ.ತಿಪ್ಪೇಸ್ವಾಮಿ, ಹಿರಿಯೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.