ಹೇಮಂತ್‌ ಕಶ್ಯಪ್‌ಗೆ ₹ 5 ಲಕ್ಷ: ಮೊದಲೇ ದೂರು ನೀಡಲಿಲ್ಲವೇಕೆ?

ಗುರುವಾರ , ಏಪ್ರಿಲ್ 25, 2019
29 °C

ಹೇಮಂತ್‌ ಕಶ್ಯಪ್‌ಗೆ ₹ 5 ಲಕ್ಷ: ಮೊದಲೇ ದೂರು ನೀಡಲಿಲ್ಲವೇಕೆ?

Published:
Updated:

‘ಬೇರೆ ಯಾರದ್ದೋ ಅಶ್ಲೀಲ ವಿಡಿಯೊಗೆ ನನ್ನ ಮುಖ ಹೊಂದಿಸಿ (ಮಾರ್ಫಿಂಗ್) ವಾಹಿನಿಗಳಲ್ಲಿ ಪ್ರಸಾರ ಮಾಡಿಬಿಡಬಹುದು ಎಂಬ ಭಯದಲ್ಲಿ ದೃಶ್ಯ ಮಾಧ್ಯಮದ ವರದಿಗಾರ ಹೇಮಂತ್‌ ಕಶ್ಯಪ್‌ಗೆ ₹ 5 ಲಕ್ಷ ಕೊಟ್ಟಿದ್ದೆ...’ ಎಂದು ವೈದ್ಯ ರಮಣ್ ರಾವ್‌ ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 21). ಅವರು ನಿಜವಾಗಿಯೂ ತಪ್ಪು ಮಾಡದಿದ್ದರೆ ಹೆದರಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಮೇಲಾಗಿ ಅವರು ವಿದ್ಯಾವಂತರು ಮತ್ತು ಪ್ರಭಾವಿಗಳು ಕೂಡಾ. ಅದರಲ್ಲಿ ನಾನು ಭಾಗಿಯಾಗಿಲ್ಲ, ಬೇಕಾದರೆ ಪ್ರಸಾರ ಮಾಡಿಕೋ ಎನ್ನುವುದರ ಜೊತೆಗೆ, ಮೊದಲೇ ಅವರು ಪೊಲೀಸರಿಗೆ ದೂರು ನೀಡಬೇಕಿತ್ತು. ಅದು ಬಿಟ್ಟು ₹ 5 ಲಕ್ಷ ನೀಡಿದ್ದೇಕೆ?

ವಿದ್ಯಾವಂತರಾದ ಇವರೇ ಪೊಲೀಸರು ಹಾಗೂ ಕಾನೂನನ್ನು ನಂಬದಿದ್ದರೆ ಸಾಮಾನ್ಯರಿಗೆ ಹೇಗೆ ಮಾದರಿಯಾದಾರು? ಸಮಾಜಕ್ಕೆ ಯಾವ ರೀತಿಯ ಸಂದೇಶವನ್ನು ನೀಡಿಯಾರು?

-ಪತ್ತಂಗಿ ಎಸ್. ಮುರಳಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !