ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕೊನೆಗೂ ನ್ಯಾಯಾಲಯವೇ ಎಚ್ಚರಿಸಬೇಕಾಯಿತು!

Last Updated 15 ಡಿಸೆಂಬರ್ 2022, 19:31 IST
ಅಕ್ಷರ ಗಾತ್ರ

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಐದು ಲಕ್ಷ ರೂಪಾಯಿ ದಂಡ ಹಾಕಿರುವುದು ವರದಿಯಾಗಿದೆ (ಪ್ರ.ವಾ., ಡಿ. 15). ಸಮಾಜವಾದಿ ಚಿಂತಕ ಎಸ್‌.ಕೆ.ಡೇ ಅವರು ಮೂವತ್ತೈದು ವರ್ಷಗಳ ಹಿಂದೆ, ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚು ಜನರ ಪಾಲ್ಗೊಳ್ಳುವಿಕೆ ಮತ್ತು ಪ್ರಾತಿನಿಧ್ಯ ಬಹಳ ಮುಖ್ಯವೆಂಬ ಆಶಯದಿಂದ ರೂಪಿಸಿದ ರಾಜಕೀಯ ತತ್ವವನ್ನು, ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ನಜೀರ್ ಸಾಬ್ ಅವರು ತುಂಬ ಮುತುವರ್ಜಿಯಿಂದ ಪಾಲಿಸಿ, ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿಗಳನ್ನು ಅಸ್ತಿತ್ವಕ್ಕೆ ತಂದು ಜನರ ಕೈಗೆ ಅಧಿಕಾರ ನೀಡಿದರು. ಅಂದಿನಿಂದ ಚುನಾವಣೆಯ ಮೂಲಕ ಸ್ಥಳೀಯ ಅಭಿವೃದ್ಧಿ, ಆಡಳಿತವು ಜನಪ್ರತಿನಿಧಿಗಳ ಕೈಯಲ್ಲಿ ಇತ್ತು. ಆದರೆ, ಚುನಾವಣೆ ನಡೆಯದ ಕಾರಣ ಒಂದು ವರ್ಷದಿಂದ ಜನಪ್ರತಿನಿಧಿ ಗಳ ಆಳ್ವಿಕೆ ಇಲ್ಲ. ಈಗ ಮೀಸಲಾತಿ ಗೊಂದಲವನ್ನು ಮುಂದೆಮಾಡಿದೆ ರಾಜ್ಯ ಸರ್ಕಾರ. ಒಟ್ಟಿನಲ್ಲಿ ಅಧಿಕಾರವು ಜನಪ್ರತಿನಿಧಿಗಳ ಕೈ ತಪ್ಪಿ ಅಧಿಕಾರಿಗಳ ಕೈಗೆ ಸೇರಿದೆ.

ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಅಭಿವೃದ್ಧಿ, ಆಡಳಿತ ಎಂತಿದ್ದರೂ ಜನಪ್ರತಿನಿಧಿಗಳ ಕೈಯಲ್ಲಿ ಇರಬೇಕೆಂದು ನ್ಯಾಯಾಲಯವೇ ಎಚ್ಚರಿಸಬೇಕಾಯಿತಲ್ಲ! ನಮ್ಮದು ಅಭಿವೃದ್ಧಿ ಪರ ಸರ್ಕಾರವೆಂದು ಹೇಳಿಕೊಳ್ಳುವ ನಾಯಕರು ಈಗಲಾದರೂ ಕಣ್ತೆರೆಯುವರೇ?!

⇒ಹುರುಕಡ್ಲಿ ಶಿವಕುಮಾರ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT