ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಅನಗತ್ಯ ವಿಚಾರಕ್ಕೆ ಆಸ್ಪದ ಬೇಡ

Last Updated 15 ಮಾರ್ಚ್ 2022, 18:45 IST
ಅಕ್ಷರ ಗಾತ್ರ

ಕೋವಿಡ್‌ನಿಂದ ಈಗಾಗಲೇ ಪಠ್ಯ, ಪ್ರಾಯೋಗಿಕ ತರಗತಿಗಳು ಹಿಂದೆ ಉಳಿದಿದ್ದು, ಪರೀಕ್ಷೆ ಇನ್ನೇನು ಸನಿಹ ಬಂದಿದೆ. ಇದರ ಮಧ್ಯೆ ಹಿಜಾಬ್‌ಗೆ ಸಂಬಂಧಿಸಿದಂತೆ ಹೈಕೋರ್ಟ್‌ ತೀರ್ಪು ಬಂದಿದೆ. ಕ್ಲಾಸ್‌ರೂಮಿನಲ್ಲಿ ಟೆನಿಸ್‌ ತಾರೆ ಸಾನಿಯಾ ಮಿರ್ಜಾ, ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ದೇಶದ ಮೊದಲ ಮಹಿಳಾ ನ್ಯಾಯಮೂರ್ತಿ ಫಾತಿಮಾ ಬೀಬಿ, ಸ್ವಾತಂತ್ರ್ಯ ಹೋರಾಟಗಾರ್ತಿ ಅರುಣಾ ಅಸಫ್ ಅಲಿ, ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರಂತಹ ಅದೆಷ್ಟು ಉತ್ಕೃಷ್ಟ ವ್ಯಕ್ತಿಗಳಿದ್ದಾರೋ ಯಾರಿಗೆ ಗೊತ್ತು?

ಇಲ್ಲಿಯತನಕ ಆಗಿದ್ದು ಆಗಿಹೋಯಿತು. ಇದೀಗ ತೀರ್ಪು ಬಂದಾಯಿತು. ಇನ್ನಾದರೂ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ತರಗತಿಗಳು ನಡೆಯಲಿ. ವಿದ್ಯಾರ್ಥಿಗಳು ಇನ್ನಾದರೂ ಅನಗತ್ಯ ವಿಚಾರಗಳಿಗೆ ತಲೆಕೆಡಿಸಿಕೊಳ್ಳದೆ, ಪರಸ್ಪರ ಸಹೋದರ, ಸಹೋದರಿಯರಂತೆ ಇದ್ದು, ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುವಂತೆ ಆಗಲಿ.
ಬಸನಗೌಡ ಪಾಟೀಲ,ಯರಗುಪ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT